ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾರಿಕಾಂಬ ಜಾತ್ರೆಯ ಪೂರ್ವಭಾವಿ ಸಭೆ

Vishwanath S
Updated On : 19 Feb 2014, 11:21 am

ಶಿವಮೊಗ್ಗ: ನಗರದ ಕೋಟೆ ಮಾರಿಕಾಂಬ ಜಾತ್ರೆಯ ಪೂರ್ವಭಾವಿ ಸಭೆ ಮಂಗಳವಾರ ದೇವಾಲಯದ ಸಭಾಂಗಣದಲ್ಲಿ ನಡೆಯಿತು.
ಪಾಲಿಕೆಯ ಮಹಾಪೌರರು ಸಮಿತಿಯ ಗೌರವಧ್ಯಕ್ಷ ಖುರ್ಷಿದಾಬಾನು ಹಾಗೂ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಮಹಾನಗರ ಪಾಲಿಕೆಯ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ಸಮಿತಿ ಪ್ರಧಾನಕಾರ್ಯದರ್ಶಿ ಎನ್.ಮಂಜುನಾಥ್,  ಮಾರಿಕಾಂಬ ಜಾತ್ರೆ ನಮ್ಮೂರ ಜಾತ್ರೆಯಾಗಿದ್ದು, ಪಾಲಿಕೆ ಸದಸ್ಯರುಗಳು ಸ್ವಚ್ಛತೆ, ಕುಡಿಯುವ ನೀರು ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಸಲಹೆ ಸೂಚನೆಗಳನ್ನು ನೀಡುವಂತೆ ಕೋರಿದರು.
ಪಾಲಿಕೆ ಸದಸ್ಯ ಎನ್.ಜೆ. ರಾಜಶೇಖರ್, ಎಸ್. ರಾಮು, ಕಾಶಿವಿಶ್ವನಾಥ್, ಐಡಿಯಲ್ ಗೋಪಿ, ಸತೀಶ್, ರೇಣುಕಾ ನಾಗರಾಜ್, ಸುರೇಖಾ ಮುರುಳೀಧರ್, ಸೇರಿದಂತೆ ಹಲವರು ಅನಿಸಿಕೆಯನ್ನು ಸಭೆಯಲ್ಲಿ ವ್ಯಕ್ತಪಡಿಸಿದರು.
ಆಯುಕ್ತ ಕರಭೀಮಣ್ಣನವರ್ ಸದಸ್ಯರ ಒತ್ತಾಯದಂತೆ ಜಾತ್ರೆಗೆ ಹೆಚ್ಚಿನ ಅನುದಾನ ನೀಡುವುದಾಗಿ ಘೋಷಿಸಿದರು.
ಸ್ವಚ್ಛತೆ ಕುಡಿಯುವ ನೀರು, ಎಲ್ಲವನ್ನೂ ಅದ್ಯತೆಗೆ ಪರಿಗಣಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ಮಹಾನಗರ ಪಾಲಿಕೆ ಮೇಯರ್ ಖುರ್ಷಿದಾಬಾನು, ಉಪ ಮೇಯರ್ ರೇಖಾ ಚಂದ್ರಶೇಖರ್, ಪಾಲಿಕೆಯ ಸದಸ್ಯರು, ಸಮಿತಿಯ ಪದಾಧಿಕಾರಿಗಳು ಹಾಗೂ ನಿರ್ದೇಶಕರು ಉಪಸ್ಥಿತರಿದ್ದರು. ಪ್ರಭಾಕರ್ ಗೌಡ ವಂದಿಸಿದರು. ಸಭೆಯಲ್ಲಿ ಹಲವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement