ಫೋರ್ಡ್ ಇಂಡಿಯಾ ಘಟಕ
ಶಿವಮೊಗ್ಗ: ಫೋರ್ಡ್ ಇಂಡಿಯಾ ತನ್ನ ಮಾರಾಟ ಮತ್ತು ಸೇವಾ ಜಾಲವನ್ನು ವಿಸ್ತರಿಸುವ ಉದ್ದೇಶದಿಂದ ಫೋರ್ಡ್ ಇಂಡಿಯಾ ಶಿವಮೊಗ್ಗದಲ್ಲಿ ಎರಡು ಘಟಕ ಆರಂಭಿಸಿದೆ.
ಬುಧವಾರ ಶಂಕರಮಠ ರಸ್ತೆಯ ಘಟಕವನ್ನು ಫೋರ್ಡ್ ಇಂಡಿಯಾ ಮ್ಯಾನ್ಯುಫ್ಯಾಕ್ಚರಿಂಗ್ ನಿರ್ದೇಶಕ ಕೆಲ್ಲ್ಕೀರ್ನ್ಸ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಶಂಕರಮಠದ ಘಟಕ ಪೂರ್ಣ ಸೇಲ್ಸ್, ಸರ್ವಿಸ್ ಮತ್ತು ಸ್ಪೇರ್ ಸೇವೆ ನೀಡಿದರೆ, ಮಂಡ್ಲಿ ಇಂಡಸ್ಟ್ರೀಯಲ್ ಎಸ್ಟೇಟ್ನಲ್ಲಿರುವ ಘಟಕದಲ್ಲಿ ಮಾರಾಟದ ನಂತರದ ಸೇವೆ ನೀಡಲಾಗುತ್ತದೆ ಎಂದು ಹೇಳಿದರು.
ಹೊಸ ಘಟಕದಿಂದ ಈ ಭಾಗದ ಫೋರ್ಡ್ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲು ಸಾಧ್ಯವಾಗಲಿದೆ. 22 ಮಾರಾಟ ಮತ್ತು ನಂತರ ಸೇವಾ ಘಟಕಗಳನ್ನು ಕರ್ನಾಟಕದಲ್ಲಿ ಹೊಂದಿದ್ದು, ಭಾರತದಾದ್ಯಂತ 164 ನಗರಗಳಲ್ಲಿ 304 ಮಳಿಗೆಗಳನ್ನು ಹೊಂದಿದೆ ಎಂದು ವಿವರಿಸಿದರು.
ಫೋರ್ಡ್ ಬ್ರಾಂಡ್ ಅನ್ನು ಭಾರತದಾದ್ಯಂತ ಎಲ್ಲಾ ಗ್ರಾಹಕರಿಗೂ ಲಭ್ಯವಾಗುವಂತೆ ಮಾಡುವುದು ಮುಖ್ಯ ಉದ್ದೇಶ. 164 ನಗರಗಳಲ್ಲಿ ಮಾರಾಟ ಮತ್ತು ಸೇವಾ ಸೌಲಭ್ಯಗಳನ್ನು ಹೊಂದಿದೆ ಎಂದು ಹೇಳಿದ ಅವರು, ಫೋರ್ಡ್ ಹಲವಾರು ಗ್ರಾಹಕ ಕೇಂದ್ರಿತ ಉಪಕ್ರಮಗಳನ್ನು ಕೈಗೊಂಡಿದೆ. ಸಬ್ ಅಸೆಂಬ್ಲಿ ಲವೆಲ್ ರಿಪೇರಿ, ದೇಶಾದ್ಯಂತ ರೋಡ್ ಸೈಡ್ ಅಸಿಸ್ಟೆನ್ಸ್, 90 ನಿಮಿಷದ ಕ್ವಿಕ್ ಸರ್ವಿಸ್, ಮೊಬೈಲ್ ಸರ್ವಿಸ್ ಸ್ವಾನ್ಸ್ ಮತ್ತು ವೆಹಿಕಲ್ ರಿಪೋರ್ಟ್ ಕಾರ್ಡ್ ಹೊಂದಿದೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕಾವೇರಿ ಫೋರ್ಡ್ನ ಡೀಲರ್ ಪ್ರಿನ್ಸಿಪಾಲ್ ಎಂ.ಪಿ. ಶ್ಯಾಮ್ ಶೆಟ್ಟಿ ಮತ್ತಿತರರು ಇದ್ದರು.