ವಾಲಿಬಾಲ್ ಲೀಗ್ ಪಂದ್ಯಾವಳಿಗೆ ಚಾಲನೆ
ತೀರ್ಥಹಳ್ಳಿ: ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಆರ್. ಎಂ. ಮಂಜುನಾಥ ಗೌಡ ಕರ್ನಾಟಕ ವಾಲಿ ಲೀಗ್ ಪಂದ್ಯಾವಳಿಯ 3ನೇ ಹಂತದ ವಾಲಿಬಾಲ್ ಪಂದ್ಯಾವಳಿಗೆ ವಿಧ್ಯುಕ್ತ ಚಾಲನೆ ನೀಡಿದರು.
ನಂತರ ಅವರು ಮಾತನಾಡಿ, ಇದೇ ಪ್ರಥಮ ಬಾರಿಗೆ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪಂದ್ಯಾವಳಿ ಇದಾಗಿದ್ದು, ಅಂತಾರಾಷ್ಟ್ರೀಯ ಹಾಗೂ ರಾಷ್ಟ್ರೀಯ ವಾಲಿಬಾಲ್ ಆಟಗಾರರು ಈ ಪಂದ್ಯಾವಳಿಯಲ್ಲಿ ಭಾಗವಹಿಸುವ ತಂಡಗಳಲ್ಲಿದ್ದಾರೆ ಎಂದು ಹೇಳಿದರು.
ಕೊಡಚಾದ್ರಿ ಸಂಸ್ಥೆ ಪ್ರಾಯೋಜಿಸಸುತ್ತಿರುವ ಕ್ರೀಡಾ ಸ್ಪಧೆಗಳಲ್ಲಿ ಇದು ಕೂಡ ಒಂದು ಭಾಗವಾಗಿದ್ದು, ವಾಲಿಬಾಲ್ ಪಂದ್ಯಾವಳಿಗೆ ಚೇತನ ನೀಡುವ ಕೆಲಸವನ್ನು ಕ್ರೀಡಾಪಡುಗಳು ಮಾಡಲಿದ್ದಾರೆ ಎಂದು ಹೇಳಿದರು.
ರು. 1 ಲಕ್ಷ ಅನುದಾನ: ಸಂಸದ ಬಿ.ವೈ. ರಾಘವೇಂದ್ರ ಭಾಗವಹಿಸಿ, ತೀರ್ಥಹಳ್ಳಿಯಲ್ಲಿ ಈ ಲೀಗ್ ಪಂದ್ಯಾವಳಿ ನಡೆಸಲು ಸಾಕಷ್ಟು ಶ್ರಮವಹಿಸಿ ಕೊಡಚಾದ್ರಿ ಸಂಸ್ಥೆ ಉತ್ತಮ ಕೆಲಸ ಮಾಡುತ್ತಿದೆ.
ಮೈದಾನಕ್ಕೆ ಶಾಶ್ವತ ಹೊನಲು ಬೆಳಕಿನ ವ್ಯವಸ್ಥೆ ಮಾಡಲು ಸಂಸದರ ನಿಧಿಯಿಂದ ರು. 1 ಲಕ್ಷ ಅನುದಾನ ನೀಡುವುದಾಗಿ ಹೇಳಿದರು. ಶಾಸಕ ಮಧು ಬಂಗಾರಪ್ಪ ಶುಭ ಹಾರೈಸಿ, ವೈಯಕ್ತಿಕವಾಗಿ ರು. 50,000 ದೇಣಿಗೆ ನೀಡುವುದಾಗಿ ಹೇಳಿದರು.