ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

24ರಂದು ಪಶು ಆಹಾರ ಘಟಕ ಉದ್ಘಾಟನೆ

Lingaraj Badiger
Updated On : 21 Feb 2014, 11:38 am

ಸಾಗರ: ಕರ್ನಾಟಕ ರಾಜ್ಯ ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೆ ಎರಡನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ ಪ್ರತಿದಿನ 55 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದ್ದು, ಗ್ರಾಮೀಣ ಭಾಗದಲ್ಲಿನ ಹೈನುಗಾರಿಕೆ ಅಭಿವೃದ್ದಿಗೆ ಇದು ಸಹಕಾರಿಯಾಗಿದೆ ಎಂದು ಶಿಮೂಲ್ ನಿರ್ದೇಶಕ ಹಾಗೂ ಮಾಜಿ ಅಧ್ಯಕ್ಷ ಶಿವಕುಮಾರ್ ಹರತಾಳು ಹೇಳಿದರು.
 ಇಲ್ಲಿನ ತೋಟಗಾರ್ಸ್ ಸಭಾಂಗಣದಲ್ಲಿ ಗುರುವಾರ ಸಹಕಾರ ಮಹಾಮಂಡಳ, ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರ ಇಲಾಖೆ ಹಾಗೂ ತೋಟಗಾರ್ಸ್ ಸೊಸೈಟಿಗಳು ಸಂಯುಕ್ತವಾಗಿ ಸಾಗರ, ಸೊರಬ, ಹೊಸನಗರ ತಾಲ್ಲೂಕಿನ ಹಾಲು ಉತ್ಪಾದಕ ಸಂಘದ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಹಮ್ಮಿಕೊಳ್ಳಲಾಗಿದ್ದ ವಿಶೇಷ ಸಹಕಾರ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
 ರಾಜ್ಯ ಸರ್ಕಾರ ಶಿಕಾರಿಪುರ ತಾಲ್ಲೂಕಿನ ಸಂಡೂರಿನಲ್ಲಿ 45 ಕೋಟಿ ರೂ. ವೆಚ್ಚದಲ್ಲಿ ಪಶು ಆಹಾರ ಘಟಕವನ್ನು ಸ್ಥಾಪಿಸಿದ್ದು, ಅದರ ಉದ್ಘಾಟನೆ ಫೆ.24ರಂದು ನಡೆಯಲಿದೆ ಎಂದರು.
ಕಾಯ್ದೆ ಕುರಿತು ಅರಿವು: ಶಿಮೂಲ್ ನಿರ್ದೇಶಕ ಬಿ.ಜಿ.ದಿನೇಶ್ ಬರದವಳ್ಳಿ ಮಾತನಾಡಿ, ಸಹಕಾರಿ ರಂಗದಲ್ಲಿ 97ರ ತಿದ್ದುಪಡಿ ಹಲವು ಬದಲಾವಣೆಗೆ ವೇದಿಕೆ ಕಲ್ಪಿಸಿಕೊಟ್ಟಿದೆ. ಸಹಕಾರಿ ಯೂನಿಯನ್ ಶಿಕ್ಷಣದ ಮೂಲಕ ಸಹಕಾರಿ ಕಾಯ್ದೆಯ ಅರಿವು ಮೂಡಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
 ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಡಿ.ಭೂಕಾಂತಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಮೂಲಲ್ನಿರ್ದೇಶಕರಾದ ಎಂ.ಜಿ.ರಾಮಚಂದ್ರ, ಟಿ.ಶಿವಶಂಕರ್, ಬಿ.ಎಂ.ಪಾಲಕ್ಷಪ್ಪ, ಸಹಕಾರ ಸಂಘಗಳ ಸಹಾಯಕ ನಿಬಂಧಕ ಜಿ.ಎಸ್.ಜಯಪ್ರಕಾಶ್, ತೋಟಗಾರ್ಸ್ ಅಧ್ಯಕ್ಷ ಕೆ.ಸಿ.ದ್ಯಾವಪ್ಪ, ಕೆ.ಆರ್.ಗಣಪತಿ ಭಟ್ ಹಾಜರಿದ್ದರು.
 ಸಹಕಾರ ಸಂಘಗಳ ಕಾಯ್ದೆ 2012ರ ತಿದ್ದುಪಡಿಕುರಿತು ಶಿವಮೊಗ್ಗ ಡಿಸಿಸಿ ಬ್ಯಾಂಕ್‌ನ ನಿವೃತ್ತ ಪ್ರಧಾನ ವ್ಯವಸ್ಥಾಪಕ ಮಹಾಬಲಗಿರಿಯಪ್ಪ, ಕಾಲುಬಾಯಿ ಜ್ವರದ ನಿಯಂತ್ರಣ ಹಾಗೂ ಮುಂಜಾಗೃತೆ ಕುರಿತು ಪಶುವೈದ್ಯ ಇಲಾಖೆ ಸಹಾಯಕ ನಿದರೇಶಕ ಡಾ. ಎಸ್.ಕಲ್ಲಪ್ಪ, ಲಾಭದಾಯಕ ಹೈನುಗಾರಿಗೆ ಕುರಿತು ಶಿಮೂಲಲ್ವ್ಯವಸ್ಥಾಪಕ ಡಾ. ಕೆ.ಪಿ.ಶಿವಶಂಕರ್ ಉಪನ್ಯಾಸ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement