ನಾಳೆಯಿಂದ ಭದ್ರಾ ಉತ್ಸವ
ಭದ್ರಾವತಿ: ಭದ್ರಾ ಉತ್ಸವ ಸಮಿತಿ, ಭದ್ರಾವತಿ ಹಾಗೂ ಅಪ್ನಾದೇಶ್ ಸಂಸ್ಥೆ ಶಿವಮೊಗ್ಗ ಜಿಲ್ಲಾ ಶಾಖೆ ಸಂಯುಕ್ತಾಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸಿಂಗನಮನೆ ಗ್ರಾಮ ಪಂಚಾಯ್ತಿ ಸಹಾಕಾರದೊಂದಿಗೆ ಫೆ.22, 23 ಮತ್ತು 24ರಂದು ಸರ್.ಎಂ. ವಿಶ್ವೇಶ್ವರಯ್ಯ ವೇದಿಕೆಯ ಬಯಲು ರಂಗಮಂದಿರದಲ್ಲಿ ಭದ್ರಾ ಉತ್ಸವ - 2014 ನಡೆಯಲಿದೆ.
ಫೆ.22ರ ಶನಿವಾರ ಮಧ್ಯಾಹ್ನ 2 ಗಂಟೆಗೆ ಕುವೆಂಪು ವಿಶ್ವವಿದ್ಯಾನಿಲಯದ ಮುಂಭಾಗದಿಂದ ಉತ್ಸವ ವೇದಿಕೆಯವರೆಗೆ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದ್ದು, ಡೊಳ್ಳುಕುಣಿತ, ವೀರಗಾಸೆ, ನಂದಿಕೋಲು, ಪೂಜಾಕುಣಿತ, ಹಲಗೆಮೇಳ, ಮಹಿಳಾ ಡೊಳ್ಳುಕುಣಿತ, ಕೋಲಾಟ, ವೀರಭದ್ರ ಕುಣಿತ, ನಾನಿಕ್ ತಂಡಗಳು ಮೆರವಣಿಗೆಗೆ ಮೆರುಗು ನೀಡಲಿವೆ.
ಕಿರುತೆರೆ ಚಲನಚಿತ್ರ ನಟ ಜಯಕುಮಾರ್ ಕೊಡಗನೂರು (ಜೂನಿಯರ್ ರಾಜ್‌ಕುಮಾರ್) ದಿಬ್ಬಣವನ್ನು ಉದ್ಘಾಟಿಸುವರು.
ಫೆ.22ರ ಶನಿವಾರ ಸಂಜೆ 6 ಗಂಟೆಗೆ ಬಯಲು ರಂಗಮಂದಿರದಲ್ಲಿ ನಡೆಯುವ ಭದ್ರಾ ಉತ್ಸವ-2014ನ್ನು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸುವರು. ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಅಪನ್ದೇಶ್ ಸಮಾಚಾರ್ ಮಾಸಪತ್ರಿಕೆ ಬಿಡುಗಡೆ ಮಾಡುವರು.