ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕೋಳಿ ಸಾಕಣೆ ತರಬೇತಿ

Lingaraj Badiger
Updated On : 22 Feb 2014, 11:05 am

ಶಿವಮೊಗ್ಗ: ಗ್ರಾಮೀಣ ಪ್ರದೇಶದ ರೈತರು, ರೈತ ಮಹಿಳೆಯರು ಹಾಗೂ ನಿರುದ್ಯೋಗಿ ಯುವಕ- ಯುವತಿಯರಿಗಾಗಿ ಫೆ. 26ರಂದು ನಗರದ ಪಶು ವೈದ್ಯಕೀಯ ಮಹಾವಿದ್ಯಾಲದ ಆವರಣದಲ್ಲಿ ವೈಜ್ಞಾನಿಕ ಪದ್ಧತಿಯಲ್ಲಿ ಕೋಳಿ ಸಾಕಾಣಿಕೆ ಕುರಿತು ಒಂದು ದಿನದ ತರಬೇತಿ ಶಿಬಿರ ಏರ್ಪಡಿಸಲಾಗಿದೆ.
ತರಬೇತಿ ಅವಧಿಯಲ್ಲಿ ಕೋಳಿ ತಳಿಗಳು, ಕೋಳಿಯ ಮನೆ ನಿರ್ಮಾಣ, ಕೋಳಿಯ ಪಾಲನೆ, ಕಾಯಿಲೆಗಳು ಮತ್ತು ಮುಂಜಾಗ್ರತಾ ಕ್ರಮಗಳು, ಕೋಳಿ ಆಹಾರ, ಲಾಭದಾಯಕ ಆದಾಯ, ಉತ್ಪನ್ನ ಚಟುವಟಿಕೆಗಳಿಗಾಗಿ ಕೋಳಿ ಸಾಕಣೆಯ ಆಯ್ಕೆ ಮುಂತಾದ ವಿಷಯಗಳ ಕುರಿತು ಮಾಹಿತಿ ಪ್ರಧಾನ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗುವುದು.
ತರಬೇತಿಯು ಸೀಮಿತ 30 ಅಭ್ಯರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುವುದರಿಂದ ಆಸಕ್ತ ರೈತರು ಫೆ. 25ರೊಳಗಾಗಿ ಹೆಸರು ನೋಂದಾಯಿಸಿಕೊಳ್ಳಬೇಕು. ವಿವರಗಳಿಗಾಗಿ ದೂ. 08182- 651002, ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement