ಮುಂದುವರಿದ ಗ್ರಾಮೀಣ ಅಂಚೆ ನೌಕರರ ಪ್ರತಿಭಟನೆ
ಭದ್ರಾವತಿ: ಗ್ರಾಮೀಣ ಅಂಚೆ ಇಲಾಖೇತರ ನೌಕರರು ಶುಕ್ರವಾರವೂ ಪ್ರತಿಭಟನೆಯನ್ನು ಮುಂದುವರಿಸಿ ಭದ್ರಾವತಿಯ ಪ್ರಧಾನ ಅಂಚೆ ಕಚೇರಿಯಿಂದ ತಾಲೂಕು ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು.
ಅಖಿಲ ಭಾರತ ಅಂಚೆ ಇಲಾಖೇತರ ನೌಕರರ ಸಂಘದ ಶಿವಮೊಗ್ಗ ವಿಭಾಗೀಯ ಘಟಕದ ಕಾರ್ಯದರ್ಶಿ ಎಚ್.ವಿ. ರಾಜ್‌ಕುಮಾರ್, ಜವರೇಗೌಡ, ಸತ್ಯನಾರಾಯಣ, ಶಾಮರಾವ್, ರಾಜು, ಗೋವಿಂದಪ್ಪ, ಹಾಲಮ್ಮ, ಸುರೇಶ್, ಸುಬ್ರಮಣಿ ಮತ್ತು ಡಿ.ಗೋವಿಂದರಾಜ್ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿದ್ದರು.