ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ
ಹೊಸನಗರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕಿನ ಗ್ರಾಮೀಣ ಅಂಚೆ ಸೇವಕರ ಸಂಘದ ಸದಸ್ಯರು ಪಟ್ಟಣದ ಅಂಚೆ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಗ್ರಾಮೀಣ ಅಂಚೆ ಸೇವಕರನ್ನು ಪೌರ ನೌಕರ ಸಿವಿಲ್ ಸರ್ವೆಂಟ್ಸ್ ಎಂದು ಪರಿಗಣಿಸಿ ಇಲಾಖೆಯ ಖಾಯಂ ನೌಕರರಿಗೆ ನೀಡುವ ಎಲ್ಲಾ ಸರ್ಕಾರಿ ಸೌಲಭ್ಯಗಳನ್ನು ನೀಡಬೇಕು, ಕೇಂದ್ರ ಸರ್ಕಾರದ 7ನೇ ವೇತನ ಆಯೋಗದ ವ್ಯಾಪ್ತಿಗೆ ಜಿ.ಡಿ.ಎಸ್ ನೌಕರರನ್ನು ಸೇರಿಸಬೇಕು, ಅನುಕಂಪದ ಆಧಾರದ ನೌಕರರಿಗೆ ಇಲಾಖೆಯ ಶೇ.100 ಸೌಲಭ್ಯಗಳನ್ನು ನೀಡಬೇಕು. ಸೇವಾ ಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು. ಹೊರಗುತ್ತಿಗೆ ತೆಗೆದುಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನಂತರ ತಹಸೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ಸಂಘದ ಸದಸ್ಯರಾದ ಹೆಚ್. ಹಿರಿಯಣ್ಣ, ಬಿ. ಅಶೋಕ್ ಕುಮಾರ್, ಟಿ. ಕೇಶವ, ಬಿ.ಕೆ. ವಿಶ್ವನಾಥ, ಬಿ.ಆರ್. ಗೋಪಾಲ ರಾವ್, ವಾಮನಮೂರ್ತಿ, ಧ್ರುವಪ್ರಭು, ಗಣಪತಿ.ವಿ, ನಾಗವೇಣಿ, ನಾಗೇಶ್ ಮೊದಲಾದವರು ಭಾಗವಹಿಸಿದ್ದರು.