ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದಿನಿಂದ ತಾಲೂಕು ಮಟ್ಟದ ಕೃಷಿ ಉತ್ಸವ

Vishwanath S
Updated On : 24 Feb 2014, 11:30 am

ತೀರ್ಥಹಳ್ಳಿ: ಫೆ.24 ಸೋಮವಾರದಿಂದ ಬಸವಾನಿಯಲ್ಲಿ ತಾಲೂಕು ಮಟ್ಟದ ಕೃಷಿ ಉತ್ಸವವನ್ನು 2 ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆ, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ವಿವಿಧ ಸಂಘಸಂಸ್ಥೆಗಳ ಸಹಯೋಗದಲ್ಲಿ ಈ ಮೇಳ ಹಮ್ಮಿಕೊಳ್ಳಲಾಗಿದೆ.  
ಕೃಷಿಯೇ ಜೀವಾಳ ಎನ್ನುವ ಗ್ರಾಮೀಣರಿಗೆ ಪೂರಕವಾದ ಯೋಜನೆ ನಿಗದಿತ ಸಮಯದಲ್ಲಿ ಕೃಷಿಕರಿಗೆ  ತಲುಪುವಂತೆ ಮಾಡುವ ಪ್ರಯತ್ನ ಇದಾಗಿದ್ದು,  ಈ ನಿಟ್ಟಿನಲ್ಲಿ ಸಂಸ್ಥೆ ಪ್ರತಿವರ್ಷ ಕೃಷಿ ಮೇಳ ನಡೆಸಿಕೊಂಡು ಬರುತ್ತಿದೆ ಎಂದರು.
ಇಲ್ಲಿಯವರೆಗೆ ಹಲವಾರು ಕೃಷಿಮೇಳಗಳನ್ನು ರಾಜ್ಯಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ. ಇಂತಹ ಉತ್ಸವಗಳಲ್ಲಿ ತಾಲೂಕು ಮಟ್ಟದ ಕೃಷಿಮೇಳವೂ ಒಂದಾಗಿದ್ದು, ತೀರ್ಥಹಳ್ಳಿ ತಾಲೂಕಿನಲ್ಲಿ ಇದು ಎರಡನೇ ತಾಲೂಕು ಮಟ್ಟದ ಕೃಷಿ ಮೇಳವಾಗಿದೆ.    
ಸಂಸದ ಬಿ.ವೈ. ರಾಘವೇಂದ್ರ  ಕೃಷಿಮೇಳವನ್ನು ಉದ್ಘಾಟಿಸುವರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಸ್ಥೆಯ  ಕಾರ್ಯವಾಹಕ ನಿರ್ದೇಶಕ  ಡಾ.ಎಲ್.ಎಚ್. ಮಂಜುನಾಥ್ ಆಶಯ ಭಾಷಣ ಮಾಡುವರು.  ಕೂಳೂರು ಸತ್ಯನಾರಾಯಣ ರಾವ್ ಅಧ್ಯಕ್ಷತೆ ವಹಿಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement