ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಸುದೀಪ್, ದೀಪ್ತಾ ಪ್ರಥಮ

Vishwanath S
Updated On : 24 Feb 2014, 11:30 am

ಶಿವಮೊಗ್ಗ: ಜಿಲ್ಲಾ ಮಟ್ಟದ ಈಜು ಸ್ಪರ್ಧೆ ಪ್ರಾಥಮಿಕ ವಿಭಾಗದಲ್ಲಿ ಸುದೀಪ್ ಹಾಗೂ ದೀಪ್ತಾ ಕ್ರಮವಾಗಿ ಬಾಲಕ ಬಾಲಕಿಯರ ವಿಭಾಗದಲ್ಲಿ ವಿಜಯಿಯಾದರು. ಕಂಟ್ರಿ ಕ್ಲಬ್‌ನಲ್ಲಿ ನಡೆದ ಜಿಲ್ಲಾ ಮಟ್ಟದ ಈಜು ಪಂದ್ಯಾವಳಿಯಲ್ಲಿ ಸುಮಾರು 125ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು. ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ ವಿಭಾಗದಲ್ಲಿ ಬಾಲಕ, ಬಾಲಕಿಯರು ಸ್ಪರ್ಧಿಸಿದರು.
ಸಂಸ್ಥೆಯ ಅಧ್ಯಕ್ಷ ಡಿ.ಎಸ್. ಅರುಣ್, ಮಾತನಾಡಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರಾದ ಕುಮಾರ್, ಎಸ್.ಕೆ. ಮುರುಗೇಂದ್ರ ಪಾಟೀಲ್, ಉದಯಕುಮಾರ್, ಕೋಚ್ ಕೃಷ್ಣಮೂರ್ತಿ, ವೈದ್ಯನಾಥ್ ಉಪಸ್ಥಿತರಿದ್ದರು.
ವಿಜೇತರ ವಿವರ: ಪ್ರಾಥಮಿಕ ಬಾಲಕರ ವಿಭಾಗ (ಕ್ರಮವಾಗಿ ಮೂರು ಸ್ಥಾನ)- ಸುದೀಪ್, ಕೃಷ್ಣಅಂಶು, ರಾಹುಲ್ ಕಾಮತ್, ಪ್ರಾಥಮಿಕ ಬಾಲಕಿಯರ ವಿಭಾಗ- ದೀಪ್ತಾ, ಭೂಮಿ, ಪ್ರಜ್ಞಾ, ಹಿರಿಯ ಪ್ರಾಥಮಿಕ ಬಾಲಕರ ವಿಭಾಗ- ಅತಿಶಯ, ಶ್ರೀರಾಮ, ನಿಶಾಂತ್. ಹಿರಿಯ ಪ್ರಾಥಮಿಕ ಬಾಲಕಿಯರ ವಿಭಾಗ- ಎಂ.ಎಸ್.ಅವಿನಾ, ಬಿ.ಎಚ್.ನೇಹಾ, ಎಂ.ಬಿ. ಸುಭಿಕ್ಷಾ, ಪ್ರೌಢಶಾಲೆ ಬಾಲಕರ ವಿಭಾಗ- ಮಹೇಶ್, ಸೂರಜ್, ಅಭಯ್.
ಪ್ರೌಢಶಾಲೆ ಬಾಲಕಿಯರ ವಿಭಾಗ- ಸಂಹಿತಾ, ವಿದ್ಯಾ, ತನ್ವಿ. ಮುಕ್ತ ಪುರುಷರ ವಿಭಾಗ- ಉದಯ ಕಿರಣ್, ಅನೂಪ್, ಜಯಣ್ಣ. ಮುಕ್ತ ಪುರುಷರ ವಿಭಾಗ2- ಸದಾನಂದ, ಮುರುಗೇಂದ್ರ ಪಾಟಿಲ್, ಶಿವರಾಜ್.
ಮುಕ್ತ ಮಹಿಳೆಯರ ವಿಭಾಗ- ಪೂಜಾ, ಅನುಸೂಯ. ಮುಕ್ತ ಮಹಿಳೆಯರ ವಿಭಾಗ2- ಸೌಮ್ಯ, ಗಂಗಮ್ಮ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement