ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪೋಲಿಯೊ ಲಸಿಕಾ ಕಾರ್ಯಕ್ರಮ: ಶೇ. 99 ಸಾಧನೆ

Vishwanath S
Updated On : 24 Feb 2014, 11:30 am

ಶಿಕಾರಿಪುರ: ಕಳೆದ ಬಾರಿಯ ಪೋಲಿಯೋ ಲಸಿಕಾ ಕಾರ್ಯಕ್ರಮದಲ್ಲಿ ಶೇ.99 ಸಾಧನೆ ಮೂಲಕ ಶಿಕಾರಿಪುರ ತಾಲೂಕಿನಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜನಾಯ್ಕ ತಿಳಿಸಿದರು.
ಭಾನುವಾರ ಪೋಲಿಯೋ ಲಸಿಕಾ ಕಾರ್ಯಕ್ರಮದನ್ವಯ ಪಟ್ಟಣದ ಬಸ್ಸು ನಿಲ್ದಾಣದಲ್ಲಿ ಮಕ್ಕಳಿಗೆ ಪೊಲಿಯೋ ಹನಿಹಾಕಿ ಅವರು ಮಾಹಿತಿ ನೀಡಿದರು.
ಈ ಬಾರಿ ಶೇ.100 ಸಾಧನೆಗಾಗಿ 199 ಬೂತ್‌ಗಳನ್ನು ತಾಲೂಕಿನಾದ್ಯಂತ ರಚಿಸಲಾಗಿದ್ದು, 260 ಸರ್ಕಾರಿ ಹಾಗೂ 300 ಅಂಗನವಾಡಿ ಸಿಬ್ಬಂದಿಯನ್ನು ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ತಿಪ್ಪೇಶ್, ಡಾ. ಜಯಂತ್, ಡಾ. ಹರ್ಷವರ್ಧನ್, ಕುಮಾರಸ್ವಾಮಿ, ಚಂದ್ರಶೇಖರ್, ಪುರಸಭಾ ಮುಖ್ಯಾಧಿಕಾರಿ ಮನೋಹರ್ ಮೊದಲಾದವರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement