ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಾನವೀಯತೆ ಶಕ್ತಿಯ ಸಂಕೇತವಾಗಲಿ

Vishwanath S
Updated On : 24 Feb 2014, 11:30 am

ಕ.ಪ್ರ.ವಾರ್ತೆ ,  ಶಂಕರಘಟ್ಟ ,  ಫೆ. 23
ಎಲ್ಲಾ ಪ್ರಾಣಿ-ಪಕ್ಷಿಗಳಿಗಿಂತ ಹೆಚ್ಚು ಆಯುಷ್ಯವನ್ನು ಪಡೆದಿರುವ ಮಾನವನು ಮನುಷ್ಯತ್ವವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಮನುಷ್ಯತ್ವವೇ ಸಂಸ್ಥೆಗಳ ಕೇಂದ್ರ ಕಾಳಜಿಯಾಗಿದ್ದು, ಅವುಗಳು ಶಕ್ತಿಯ ಸಂಕೇತವಾಗಬೇಕೆಂದು ಸಂಸದ ಬಿ.ವೈ. ರಾಘವೇಂದ್ರ ಅಭಿಪ್ರಾಯ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾನಿಲಯದ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ದೀನಬಂಧು ಸೇವಾ ಟ್ರಸ್ಟ್ ಏರ್ಪಡಿಸಿದ್ದ ದೀನಬಂಧು ಪ್ರಕಾಶನ ಉದ್ಘಾಟನೆ ಮತ್ತು ಸಂಭ್ರಮ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆಗೆ ಪ್ರೇರಣೆ: ಸಂಭ್ರಮ ಪುಸ್ತಕ ಬಿಡುಗಡೆ ಮಾತನಾಡಿದ ಕುಲಪತಿ ಪ್ರೊ. ಎಸ್.ಎ. ಬಾರಿಯವರು, ಸಾಮಾಜಿಕ ಬದಲಾವಣೆಯ ಕೇಂದ್ರ ಕಾಳಜಿಯನ್ನೊಂದಿರುವ ಸಂಭ್ರಮ ಕೃತಿಯು ಉತ್ತಮ ಸಾಧಕರಾಗಲು ಪ್ರೇರೇಪಿಸುವಂತಹ ಲೇಖನಗಳನ್ನು ಹೊಂದಿರುವ ಕೃತಿಯಾಗಿದೆ ಎಂದು ತಿಳಿಸಿದರು.
ದೀನಬಂಧು ಪ್ರಕಾಶನದ ಲಾಂಛನವನ್ನು ಬಿಡುಗಡೆ ಮಾಡಿ ಮಾತನಾಡಿದ ಕುಲಸಚಿವರಾದ ಪ್ರೊ. ಮಲ್ಲಿಕಾಘಂಟಿಯವರು ಪ್ರಕಾಶನವು ನಿರ್ಲಕ್ಷ್ಯಕ್ಕೊಳಗಾದವರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನಕ್ಕೆ ಪ್ರೇರಕವಾಗಬೇಕು. ಸಮಾನತೆ ಮತ್ತು ಪ್ರಗತಿಯ ಆಶಯವನ್ನೊಂದಿರುವ ಈ ಲಾಂಛನಕ್ಕೆ ಹೆಚ್ಚು ಅರ್ಥಪೂರ್ಣತೆಯಿದೆ ಎಂದು ಹೇಳಿದರು.
ಸಂಭ್ರಮ ಕೃತಿ ಕುರಿತು ಮಾತನಾಡಿದ ಪ್ರಾಧ್ಯಾಪಕ ಡಾ. ಜಿ. ಪ್ರಶಾಂತನಾಯಕ, ಪತ್ರಿಕೆಗಳು ಎಚ್ಚರವಾಗಿ ಬೌದ್ಧಿಕ  ಪ್ರಜ್ಞೆಯಾಗಿ ಕೆಲಸ ಮಾಡಬೇಕು. ಅಕ್ಷರ ಮಾಧ್ಯಮವು ಅಕ್ಕರೆಯನ್ನು ಕಲಿಸುವಂತಹದ್ದು, ದೃಶ್ಯ ಮಾಧ್ಯಮಗಳಿಂದ ಸಂಬಂಧಗಳು ಸಡಿಲಗೊಳ್ಳುತ್ತಿರುವ ಸಂದರ್ಭದಲ್ಲಿ ಅಕ್ಷರ ಮಾಧ್ಯಮದ ಮೂಲಕ ಈ ನಾಡು ಮತ್ತು ನುಡಿಯನ್ನು ಭದ್ರಗೊಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಎಂ.ಜೆ. ಅಪ್ಪಾಜಿಯವರು ವಹಿಸಿದ್ದರು. ಎಸ್.ಬಿ. ಶಿವಲಿಂಗಪ್ಪ ಪ್ರಾರ್ಥಿಸಿದರು. ದೀನಬಂಧು ಸೇವಾ ಟ್ರಸ್ಟ್‌ನ ಅಧ್ಯಕ್ಷರು, ಸಂಭ್ರಮ ಕೃತಿಯ ಸಂಪಾದಕ ಎಂ. ರಮೇಶ್ ಸ್ವಾಗತಿಸಿದರು. ಎಂ. ಸಿದ್ದರಾಮ ವಂದಿಸಿದರು. ಪಿ. ಮಹೇಶ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement