ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ನಾಯಕತ್ವ ಕೊರತೆಯಿಂದ ರಾಜಕೀಯದಲ್ಲಿ ಹಿನ್ನಡೆ'

Vishwanath S
Updated On : 25 Feb 2014, 11:33 am

ಕ.ಪ್ರ.ವಾರ್ತೆ, ಶಿವಮೊಗ್ಗ, ಫೆ.23 ನಾಯಕತ್ವದ ಕೊರತೆ ಇರುವುದರಿಂದ ಬಾಹುಸಾರ ಕ್ಷತ್ರಿಯ ಸಮಾಜ ಆರ್ಥಿಕ, ಸಾಮಾಜಿಕ, ರಾಜಕೀಯ ಕ್ಷೇತ್ರದಲ್ಲಿ ಹಿಂದೆ ಬೀಳುವಂತಾಗಿದೆ ಎಂದು ಅಖಿಲ ಭಾರತ ಬಾಹುಸಾರ ಕ್ಷತ್ರಿಯ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ನಾರಾಯಣ ರಾವ್ ಹೇಳಿದರು.
ತಾಲೂಕಿನ ಲಕ್ಕಿನಕೊಪ್ಪದಲ್ಲಿರುವ ಅಮೂಲ್ಯ ಶೋಧದ ನೆನಪು ಸಭಾಂಗಣದಲ್ಲಿ ಅಖಿಲ ಭಾರತ ಬಾಹುಸಾರ ಕ್ಷತ್ರಿಯ ಮಹಾಸಭಾದಿಂದ ಸಮಾಜ ಬಾಂಧವರಿಗೆ ಆಯೋಜಿಸಲಾಗಿದ್ದ ನಾಯಕತ್ವ ತರಬೇತಿ ಉದ್ಘಾಟಿಸಿ ಮಾತನಾಡಿದರು.
ನಾಯಕತ್ವ ಗುಣ: ಯುವಜನತೆಗೆ ಹಾಗೂ ಮಹಿಳೆಯರಿಗೆ ನಾಯಕತ್ವ ಗುಣ ಕಲಿಸುವ ಅವಶ್ಯಕತೆ ಇದೆ. ಅವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಮೂಲಕ ಸಮಾಜದ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರಮುಖರು ಚಿಂತಿಸಬೇಕಿದೆ ಎಂದು ಹೇಳಿದರು. ಸಮಾಜ ಹಾಗೂ ನಾಡಿನ ಏಳಿಗೆಗೆ ಇಂತಹ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಇದರ ಸದುಪಯೋಗ ಪಡಿಸಿಕೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ಎಸ್. ಚಂದ್ರಕಾಂತ್ ವಹಿಸಿದ್ದರು. ಕೆ.ಟಿ. ಶ್ರೀನಿವಾಸ, ಗಜೇಂದ್ರನಾಥ್, ಆರ್.ಬಿ. ಪುರುಷೋತ್ತಮ, ವೆಂಕಟೇಶ್ ಮೊದಲಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement