ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಬಿಎಸ್‌ಎನ್‌ಎಲ್‌'ಗೆ ಕೊಡಚಾದ್ರಿ ಕಪ್

Vishwanath S
Updated On : 25 Feb 2014, 11:33 am

ತೀರ್ಥಹಳ್ಳಿ: ಕೊಡಚಾದ್ರಿ ಜನವೇದಿಕೆ ಪ್ರಾಯೋಜಿತ ರಾಷ್ಟ್ರೀಯ ಮಟ್ಟದ ವಾಲಿಬಾಲ್ ಲೀಗ್ ಪಂದ್ಯಾವಳಿಯಲ್ಲಿ ಬೆಂಗಳೂರಿನ ಬಿಎಸ್‌ಎನ್‌ಎಲ್ ತಂಡ ಕೊಡಚಾದ್ರಿ ಕಪ್ ಗೆದ್ದುಕೊಂಡಿದೆ.
ಕಳೆದ 5 ದಿನಗಳಿಂದ ಲೀಗ್ ಪಂದ್ಯಾವಳಿಗಳು ನಡೆದು, ಈ ಪಂದ್ಯಾವಳಿಯಲ್ಲಿ ವಿವಿಧ ತಂಡಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ವಾಲಿಬಾಲ್ ಆಟಗಾರರು ಪಾಲ್ಗೊಂಡಿದ್ದರು. ಜಿಂದಾಲ್, ಸ್ಫೋಟ್ಸ್  ಹಾಸ್ಟೆಲ್, ಬಿಎಸ್‌ಎನ್‌ಎಲ್, ಕರ್ನಾಟಕ ವಾಲಿ (ಕೆವಿಎಲ್), ಎಂಇಜಿ, ಪೋಸ್ಟಲ್ ಇಂಡಿಯಾ ತಂಡಗಳು ಭಾಗವಹಿಸಿದ್ದವು.    
ಪ್ರತಿದಿನ ಮೂರು ಪಂದ್ಯಾವಳಿ ನಡೆದಿದ್ದು, ಒಟ್ಟು 15 ಪಂದ್ಯಾವಳಿಗಳು ನಡೆದವು. ಅಂತಿಮ ದಿನವಾದ ಭಾನುವಾರ 2 ಪಂದ್ಯಾವಳಿಗಳು ಎಂ.ಇ.ಜಿ ಹಾಗೂ ಬಿಎಸ್‌ಎನ್‌ಎಲ್ ಮತ್ತು  ಜಿಂದಾಲ್ ಹಾಗೂ ಯೂತ್                  ಹಾಸ್ಟೆಲ್ ತಂಡಗಳ ನಡುವೆ ನಡೆಯಿತು. ತಡರಾತ್ರಿಯವರೆಗೂ ಪಂದ್ಯಾವಳಿ ರೋಮಾಂಚಕಾರಿಯಾಗಿ ನಡೆದವು.
ಎಂಇಜಿ ಹಾಗೂ ಬಿಎಸ್‌ಎನ್‌ಎಲ್ ತಂಡಗಳ ನಡುವೆ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ ತಂಡ 2-1 ಅಂತರದಲ್ಲಿ ಗೆಲುವು ಸಾಧಿಸಿತು. ನಂತರ  ಜಿಂದಾಲ್ ಹಾಗೂ ಯೂತ್ ಹಾಸ್ಟೆಲ್ ತಂಡದ ನಡುವೆ ನಡೆದ ಪಂದ್ಯದಲ್ಲಿ ಜಿಂದಾಲ್ ತಂಡ 3-1ರಲ್ಲಿ ಗೆಲುವು ಸಾಧಿಸಿತು.
ಜಿಂದಾಲ್ ತಂಡವನ್ನು ಪ್ರತಿನಿಧಿಸಿರುವ ರಾಷ್ಟ್ರೀಯ ವಾಲಿಲ್ ತಂಡದ ಕ್ಯಾಪ್ಟನ್ ಗುರ್ವಿಂದರ್ ಸಿಂಗ್, ಮತ್ತೊಬ್ಬ ರಾಷ್ಟ್ರೀಯ ಆಟಗಾರ ಜಿಂದಲ್ ತಂಡ ಅನುಪ್ ಡಿಕಾಸ್ಟ್  ತಮ್ಮ ಶಕ್ತಿಯುತ ಹೊಡೆತಗಳಿಂದ ಉತ್ತಮ ಆಟ ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿ, ತುದಿಗಾಲಿನಲ್ಲಿ ನಿಲ್ಲಿಸಿದರು.
ಈ ಪಂದ್ಯಾವಳಿಯುದ್ದಕ್ಕೂ ಅತ್ಯುತ್ತಮವಾಗಿ ಆಡಿದ ಬಿಎಸ್‌ಎನ್ ತಂಡ ಅಗ್ರಸ್ಥಾನ ಪಡೆದಿದ್ದು, ಕೊಡಚಾದ್ರಿ ಕಪ್‌ನ್ನು ತನ್ನದಾಗಿಸಿಕೊಂಡಿತು.
ಈ ಲೀಗ್ ಪಂದ್ಯಾವಳಿಯನ್ನು ತೀರ್ಥಹಳ್ಳಿಯಲ್ಲಿ  ಹಮ್ಮಿಕೊಂಡ ಕೊಡಚಾದ್ರಿ ಜನ ವೇದಿಕೆಯ ರೂವಾರಿಆರ್. ಎಂ. ಮಂಜುನಾಥ ಗೌಡ ವಿಜೇತರಿಗೆ ಕೊಡಚಾದ್ರಿ ಕಪ್ ನೀಡಿದರು. ರಾಷ್ಟ್ರೀಯ ವಾಲಿಬಾಲ್ ರೆಫ್ರಿಗಳಾದ ಆನಂದ್, ಕಿರಣ್ ಕುಮಾರ್ ತೀರ್ಪುಗಾರರಾಗಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement