ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿ ರ್ಯಾಲಿಗೆ 10,000 ಕಾರ್ಯಕರ್ತರು

Vishwanath S
Updated On : 25 Feb 2014, 11:33 am

ಕ.ಪ್ರ.ವಾರ್ತೆ ,  ಸೊರಬ ,  ಫೆ. 24
ಶಿವಮೊಗ್ಗದಲ್ಲಿ ಫೆ.26ರಂದು ನಡೆಯಲಿರುವ ಜೆಪಿಯ ಭಾರತ ಗೆಲ್ಲಿಸಿ ರ್ಯಾಲಿಗೆ ತಾಲೂಕಿನಿಂದ 10,000 ಕ್ಕೂ ಅಧಿಕ ಕಾರ್ಯಕರ್ತರು ತೆರಳುವ ನಿರೀಕ್ಷೆಯಿದೆ ಎಂದು ಪಕ್ಷದ ತಾಲೂಕು ಅಧ್ಯಕ್ಷ ಎಂ.ಆರ್. ಪಾಟೀಲ್ ತಿಳಿಸಿದರು.
ಸೋಮವಾರ ಸಂಜೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಸದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಶಿವರಾಜಸಿಂಗ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಸಂಸದ ಆಯನೂರು ಮಂಜುನಾಥ್ ಹಾಗೂ ಅನೇಕ ರಾಜ್ಯ, ಜಿಲ್ಲಾ ಪಕ್ಷದವರು ಪಾಲ್ಗೊಳ್ಳುತ್ತಾರೆ ಎಂದರು.
ಇಲ್ಲಿನ ಪ್ರತಿ ಬೂತ್‌ನಿಂದ ಎರೆಡೆರಡು ಬಸ್ ವ್ಯವಸ್ಥೆ ಮಾಡಲಾಗಿದ್ದು, ಸೊರಬ ಕ್ಷೇತ್ರದಿಂದ ಒಟ್ಟು ನೂರು ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 10 ಗಂಟೆಗೆ ಇಲ್ಲಿಂದ ತೆರಳಲಿದ್ದು, ಮಧ್ಯಾಹ್ನದ ಉಪಹಾರ ವ್ಯವಸ್ಥೆ ಕೂಡ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ತಾಲೂಕಿನ ಪಕ್ಷದ ಹಿತೈಶಿಗಳು, ಅಭಿಮಾನಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಗೆ ಆಗಮಿಸಬೇಕು ಎಂದು ಕೋರಿದ್ದಾರೆ. ಪಕ್ಷದ ಪ್ರಮುಖರಾದ ವಕೀಲ ಎಂ. ನಾಗಪ್ಪ, ಪಾಣಿರಾಜಪ್ಪ, ಗುರುಕುಮಾರ್ ಪಾಟೀಲ್, ಬಸವರಾಜಪ್ಪಗೌಡ, ಶಿವಯೋಗಿ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement