ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಶಿವಮೊಗ್ಗಕ್ಕಿಂದು ರಾಜನಾಥ ಸಿಂಗ್

Vishwanath S
Updated On : 26 Feb 2014, 11:39 am

ಕ.ಪ್ರ.ವಾರ್ತೆ ,  ಶಿವಮೊಗ್ಗ ,  ಫೆ. 25
ಲೋಕಸಭೆ ಚುನಾವಣೆ ಘೋಷಣೆ ಆಗುವುದಕ್ಕೆ ಕೆಲವೇ ದಿನಗಳು ಇರುವಂತೆ ಬಿಜೆಪಿಯು ಬೃಹತ್ ಸಮಾವೇಶದ ಭರ್ಜರಿ ಸಿದ್ಧತೆ ನಡೆಸಿದೆ. ನಗರಾದ್ಯಂತ ನರೇಂದ್ರ ಮೋದಿ, ರಾಜನಾಥ ಸಿಂಗ್, ಯಡಿಯೂರಪ್ಪ ಸೇರಿದಂತೆ ಹಲವರ ಭಾವಚಿತ್ರ ಹೊಂದಿದ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಬಸ್ ಡಿಪೋ ಪಕ್ಕದಲ್ಲಿರುವ ನಗರಸಭೆ ಮೈದಾನದಲ್ಲಿ ಸಮಾವೇಶದ ಪೆಂಡಾಲ್ ಎದ್ದು ನಿಂತಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಭಾಗವಹಿಸಲಿರುವ ಈ ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಹಾಗೂ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ. ನಗರದ ಪ್ರತಿ ದಿಕ್ಕಿನಲ್ಲೂ ವಾಹನ ಪಾರ್ಕಿಂಗ್ ಹಾಗೂ ಊಟದ ವ್ಯವಸ್ಥೆ ಮಾಡಲಾಗಿದೆ.
ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಆಯನೂರು ಮಂಜುನಾಥ್, ಕಾರ್ಯಕ್ರಮದ ಸ್ಥಳದಲ್ಲಿ ಬೃಹತ್ ವೇದಿಕೆ ನಿರ್ಮಿಸಿದ್ದು, ಆಗಮಿಸುವ ಕಾರ್ಯಕರ್ತರಿಗೆ ಕುಡಿವ ನೀರು, ಶೌಚಾಲಯ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ಸಂಸದ ಬಿ.ವೈ. ರಾಘವೇಂದ್ರ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ಪ್ರಮುಖರಾದ ದೇವದಾಸ್ ನಾಯ್ಕ್, ದತ್ತಾತ್ರಿ, ಜ್ಯೋತಿಪ್ರಕಾಶ್, ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿದ್ದರು.
ಊಟ, ಪಾರ್ಕಿಂಗ್
ಭದ್ರಾವತಿ, ಹೊಳೆಹೊನ್ನೂರು, ಆನವೇರಿ, ಹಸೂಡಿ ಭಾಗದಿಂದ ಬರುವ ಕಾರ್ಯಕರ್ತರಿಗೆ ಬೈಪಾಸ್ ರಸ್ತೆಯಲ್ಲಿರುವ ನಂದನ ಶಾಲೆಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇವರು ನಂತರ ಹೊಸ ಸೇತುವೆ ಮೂಲಕ ನ್ಯೂಮಂಡ್ಲಿ ತಲುಪಿ ವಾಹನಗಳ ನಿಲುಗಡೆ ಮಾಡಬೇಕು.
ತೀರ್ಥಹಳ್ಳಿ ರಸ್ತೆ ಮೂಲಕ ಶಿವಮೊಗ್ಗ ಪ್ರವೇಶಿಸುವವರಿಗೆ ಹೊಸಹಳ್ಳಿ ಗ್ರಾಮದ ಕಲ್ಯಾಣ ಮಂದಿರದಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ಇವರೂ ಸಹ ನ್ಯೂಮಂಡ್ಲಿ ಮೂಲಕ ವಾಹನ ಪಾರ್ಕಿಂಗ್ ಸ್ಥಳ ತಲುಪಬಹುದು.
ಸೊರಬ ಹಾಗೂ ಶಿಕಾರಿಪುರದಿಂದ ಆಗಮಿಸುವ ಕಾರ್ಯಕರ್ತರಿಗೆ ಸವಳಂಗ ರಸ್ತೆಯಲ್ಲಿರುವ ಬಾಪೂಜಿ ಕಾಲೇಜಿನಲ್ಲಿ ಊಟದ ವ್ಯವಸ್ಥೆ ಮಾಡಲಾಗಿದೆ. ನಂತರ ಇವರು ಉಷಾ ನರ್ಸಿಂಗ್ ಬಳಿಯಿಂದ 100 ಅಡಿ ರಸ್ತೆ ಮೂಲಕ ವಿನೋಬನಗರ ಪೊಲೀಸ್ ಚೌಕಿ, ಆಲ್ಕೊಳ ವೃತ್ತ, ಗೋಪಾಲಗೌಡ ಬಡಾವಣೆ ಮೂಲಕ ಪಾರ್ಕಿಂಗ್ ಸ್ಥಳ ತಲುಪಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement