ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಸಮಾಜ ಅಭಿವೃದ್ಧಿಗೆ ಮಹಿಳೆ ಶ್ರಮಿಸಲಿ'

Vishwanath S
Updated On : 26 Feb 2014, 11:40 am

ಕ.ಪ್ರ.ವಾರ್ತೆ ಟಿ ಹೊಸನಗರ ಟಿ ಫೆ.25
ಸಮಾಜದ ಶ್ರೇಯೋಭಿವೃದ್ಧಿಗೆ ಕೊಡುಗೆ ನೀಡುವ ಜವಾಬ್ದಾರಿಯುತ ಕಾರ್ಯ ಮಹಿಳೆಯರಿಂದಾಗಬೇಕು ಎಂದು ಹವ್ಯಕ ಮಹಾಮಂಡಲದ ಅಧ್ಯಕ್ಷೆ ಈಶ್ವರಿ ಬೇರ್ಕಡವು ಹೇಳಿದರು.
ಇಲ್ಲಿನ ರಾಮಚಂದ್ರಾಪುರ ಹವ್ಯಕ ಮಾತೃ ಮಂಡಲ ಏರ್ಪಡಿಸಿದ್ದ ಮಹಿಳಾ ಸಮಾವೇಶ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಕೆಲವು ವರ್ಷಗಳ ಹಿಂದೆ ಕೇವಲ ಮನೆಗೆ ಸೀಮಿತವಾಗಿದ್ದ ಮಹಿಳೆ ಇಂದು ಸಮಾಜದ ಎಲ್ಲ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ್ದಾರೆ. ಹಾಗೇ  ಸಂಘಟನೆಯ ಶಕ್ತಿ ಕೂಡ ತೋರ್ಪಡಿಸಿದ್ದಾಳೆ. ಈ ಮೂಲಕ ಸಮಾಜಕ್ಕೆ ಮಹತ್ತರ ಕೊಡುಗೆ ನೀಡುವಂತಾಗಬೇಕು ಎಂದರು.
ಸಾಗರ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಶಂಕರಶಾಸ್ತ್ರಿ ಮಾತನಾಡಿ, ಆರಾಧನೆಗಿಂತ ಅರ್ಥೈಸುವ ಕಾರ್ಯವಾಗಬೇಕು. ಅರ್ಥವಿಲ್ಲದೆ ಕೇವಲ ಆಚರಣೆ ಮಾಡುವ ಮೌಢ್ಯ ಖಂಡಿತಾ ನಮಗಿಲ್ಲ. ಮತ್ತೊಬ್ಬರು ನಮಗೆ ಆದರ್ಶರಾಗದೆ ನಾವು ಮತ್ತೊಬ್ಬರಿಗೆ ಆದರ್ಶರಾಗುವಂತಾಗುವ ಗುಣ ಕೂಡ ನಮ್ಮಲ್ಲಿದೆ ಎಂದರು.
ಮಂಡಲ ಅಧ್ಯಕ್ಷ ಭಾಗಿ ಸತ್ಯನಾರಾಯಣ ಅಧ್ಯಕ್ಷತೆವಹಿಸಿದ್ದರು. ಸ್ಥಳೀಯ ಮಾತೃ ವಿಭಾಗದ ಅಧ್ಯಕ್ಷೆ ಭಾನುಮತಿ, ರಚನಾ ಸ್ವಾಗತಿಸಿ, ಮಾಲಿನಿ ಸಭಾಹಿತ್ ನಿರೂಪಿಸಿ, ಶಾಲಿನಿ ರಂಗನಾಥ್ ವಂದಿಸಿದರು. ನಂತರ ಮಹಿಳೆಯಿಂದ ಭಜನಾ ಸ್ಪರ್ಧೆ, ಪುಟಾಣಿಗಳ ಛದ್ಮವೇಷ ಸ್ಪರ್ಧೆ ಹಾಗೂ ಸಾಂಸ್ಕೃತಿಕ ಸ್ಪರ್ಧೆ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement