ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಅರಣ್ಯ ಹಕ್ಕು ಪತ್ರ ವಿತರಣೆ

Vishwanath S
Updated On : 1 Mar 2014, 11:28 am

ಶಿವಮೊಗ್ಗ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಂಯುಕ್ತಾಶ್ರಯದಲ್ಲಿ ಮಾರ್ಚ್ 1ರಂದು ಮಧ್ಯಾಹ್ನ 3 ಗಂಟೆಗೆ ನಗರದ ಕುವೆಂಪು ರಂಗಮಂದಿರದಲ್ಲಿ ಅರಣ್ಯ ಹಕ್ಕು ಪತ್ರ ವಿತರಣಾ ಕಾರ್ಯಕ್ರಮ ಏರ್ಪಡಿಸಿದೆ. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿಯವರ ಉಪಸ್ಥಿತಿಯಲ್ಲಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪನವರ ಹಕ್ಕು ಪತ್ರ ವಿತರಣೆ ಮಾಡುವರು. ಸಚಿವ ಕಿಮ್ಮನೆ ರತ್ನಾಕರ್ ಉದ್ಘಾಟಿಸುವರು. ವಿಧಾನಸಭಾ ಸದಸ್ಯ ಕೆ.ಬಿ. ಪ್ರಸನ್ನ ಕುಮಾರ್ ಅಧ್ಯಕ್ಷತೆ ವಹಿಸುವರು. ಜನಪ್ರತಿನಿಧಿಗಳು ಸೇರಿದಂತೆ ಅರಣ್ಯ ಇಲಾಖೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸ್ಮಿತಾ ಬಿಜ್ಜೂರ್, ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಸಿಕಾಂತ್ ಸೆಂಥಿಲ್ ಉಪಸ್ಥಿತರಿರುವರು.
ಅದ್ವೈತ ದರ್ಶನ
ಸಾಗರ: ಇಲ್ಲಿನ ಶೃಂಗೇರಿ ಶಂಕರಮಠದ ಶಾಂಕರತತ್ವ ಪ್ರಸರಣ ಕೇಂದ್ರದ ಆಶ್ರಯದಲ್ಲಿ ಮಾ.1 ಮತ್ತು 2 ರಂದು ಸಂಜೆ 6 ಗಂಟೆಗೆ ಶಂಕರಮಠದಲ್ಲಿ “@¥æÊ>ç}Ú ¥ÚËÚ%«Ú’ ಮತ್ತು ಮಾ.2 ಮತ್ತು 3 ರಂದು ಬೆಳಗ್ಗೆ 7 ಗಂಟೆಯಿಂದ ಉಪನಿಷತ್ ದರ್ಶನ, ಪ್ರವಚನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಮೊ. 9448244144 ಸಂಪರ್ಕಿಸಲು ಮಠದ ಅಶ್ವಿನಿಕುಮಾರ್ ಕೋರಿದ್ದಾರೆ.
ನೆಲ ಅಗೆಯುವಾಗ ಎಚ್ಚರಿಕೆ: ಮೆಸ್ಕಾಂ
ಶಿವಮೊಗ್ಗ:  ಮೆಸ್ಕಾಂ ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಶಿವಪ್ಪನಾಯಕ ವೃತ್ತದಿಂದ ಗಾಂಧಿಬಜಾರ್ ಮಾರಿ ಗದ್ದುಗೆವರೆಗೆ ಹಾಗೂ ಬಿ.ಎಚ್. ರಸ್ತೆಯ ಎರಡೂ ಬದಿಯಲ್ಲಿ ಈಗಾಗಲೇ ಭೂಗತ ಕೇಬಲ್ ಚೇತನಗೊಳಿಸಿರುವುದರಿಂದ ಮುಂಬರುವ ಕೋಟೆ ಮಾರಿಕಾಂಬ ಹಬ್ಬದಲ್ಲಿ ಯಾವುದೇ ಬ್ಯಾನರ್‌ಗಳನ್ನು ಅಳವಡಿಸಲು ನೆಲ ಅಗೆಯುವಾಗ ಭೂಗತ ಕೇಬಲ್ ಬಗ್ಗೆ ಸ್ಥಳೀಯ ಅಧಿಕಾರಿಗಳಿಂದ ಮಾಹಿತಿ ಪಡೆಯುವಂತೆ ತಿಳಿಸಿದೆ. ಇಂತಹ ಸಂದರ್ಭದಲ್ಲಿ ಆಕಸ್ಮಿಕ ಸನ್ನಿವೇಶಗಳಲ್ಲಿ ಆಗುವ ವಿದ್ಯುತ್ ಅವಘಡಗಳಿಗೆ ಮೆಸ್ಕಾಂ ಇಲಾಖೆ ಜವಾಬ್ಧಾರರಾಗುವುದಿಲ್ಲ ಎಂದು ಮೆಸ್ಕಾಂ ನಗರ ಉಪ ವಿಭಾಗ- 2ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement