ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಓದು ಬದುಕನ್ನು ಬದಲಾಯಿಸಬಲ್ಲದು: ಕಿಮ್ಮನೆ

Vishwanath S
Updated On : 1 Mar 2014, 11:27 am

ತೀರ್ಥಹಳ್ಳಿ: ಓದು ಬದುಕನ್ನು ಬದಲಾವಣೆ ಮಾಡುತ್ತದೆ. ಬರವಣಿಗೆಗೆ ಅಧ್ಯಯನದ ಹಿನ್ನೆಲೆ ಇಲ್ಲದಿದ್ದರೆ ಅದಕ್ಕೆ ಬದಲಾವಣೆ ಮಾಡುವ ಶಕ್ತಿ ಬರುವುದಿಲ್ಲ.  ನಾಲ್ಕು ಗೋಡೆಗಳ ಮಧ್ಯೆ ಇದ್ದರೂ, ಒಳಗಿದ್ದೇ ಕೃತಿ ರಚನೆ ಮಾಡಿದ ಕುವೆಂಪು ಶಕ್ತಿಗೆ ಕ್ರಾಂತಿ ಮಾಡುವ ರಚನಾತ್ಮಕ ಬಲ ಬಂದಿತು ಎಂದು   ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಹಾಗೂ ಗ್ರಂಥಾಲಯ  ಸಚಿವ ಕಿಮ್ಮನೆ ರತ್ನಾಕರ್ ಅಭಿಪ್ರಾಯಪಟ್ಟರು.     
 ತೀರ್ಥಹಳ್ಳಿಯ ರಾಷ್ಟ್ರಕವಿ ಕುವೆಂಪು ಸ್ಮಾರಕ ಗ್ರಂಥಾಲಯದ  ವಿಸ್ತರಣಾ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಒಂದು ಕೃತಿಯ ಕೃತಿಕಾರನ ಬಗ್ಗೆ ಹೆಚ್ಚು  ತಲೆಕೆಡಿಕೊಳ್ಳುವ ಅಗತ್ಯವಿಲ್ಲ,  ಆದರೆ ಕೃತಿಯಲ್ಲಿ  ಏನು ಅಡಗಿದೆ ಎನ್ನುವುದನ್ನು ಮನನ ಮಾಡಿಕೊಂಡರೆ ಆ ಕೃತಿಯ ಸಾರ್ಥಕತೆ ಅದರಲ್ಲಿ ಅಡಗಿರುತ್ತದೆ ಎಂದರು.     
 ತೀರ್ಥಹಳ್ಳಿಯಲ್ಲಿ ವಿಸ್ತ್ರತಗೊಂಡಿರುವ ಗ್ರಂಥಾಲಯ ಡಿಜಿಟಲ್ ಗ್ರಂಥಾಲಯವಾಗಿ ರೂಪುಗೊಳ್ಳಲಿದೆ, ಇದು ಇಂದಿನ ಅಗತ್ಯ ಎಂದು ಹೇಳಿದ ಅವರು ತಾಲ್ಲೂಕಿನ ಆರಗ ಮತ್ತು ಕೋಣಂದೂರಿನಲ್ಲಿ  ಸಾರ್ವಜನಿಕ ಗ್ರಂಥಾಲಯಕ್ಕೆ ತಲಾ 15 ಲಕ್ಷ ರೂ.ಗಳ  ಅನುದಾನ ಮಂಜೂರಾಗಿದೆ ಎಂದು ಹೇಳಿದರು.   
 ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಕೂಡಿಗೆ ಕೆ.ಜಿ. ವೆಂಕಟೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿದರು.  ಬೆಂಗಳೂರಿನ ಸಾರ್ವಜನಿಕ ಗ್ರಂಥಾಲಯದ ನಿರ್ದೇಶಕ  ಎಂ.ಎಂ. ಬಡ್ನಿ  ಸ್ವಾಗತಿಸಿ, ಪ್ರಾಸ್ಥಾವಿಕ ನುಡಿಗಳನ್ನಾಡಿದರು. ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಿದರು. ಬಿ. ಚಂದ್ರೇಗೌಡ ಕಾರ್ಯಕ್ರಮವನ್ನು ನಿರೂಪಿಸಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ರೇಣುಕಾ ನಾಗರಾಜ್, ತಾ.ಪಂ.ಸದಸ್ಯ ಬಾಳೇಹಳ್ಳಿ ಪ್ರಭಾಕರ್, ಹೊಸಳ್ಳಿ ಸುಧಾಕರ್,  ಪಟ್ಟಣ ಪಂಚಾಯ್ತಿ ಸದಸ್ಯ  ಪಿ.ಸಿ.ಸತೀಶ ಶೆಟ್ಟಿ,  ಪ್ರೇಮಗಣೇಶ್, ಜಿಲ್ಲಾ ಗ್ರಂಥಾಲಯ ಉಪನಿರ್ದೇಶಕ ಎಂ.ಆರ್. ಹರೀಶ್ ವೇದಿಕೆಯಲ್ಲಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement