ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕಳಪೆ ಬೀಜ ವಿತರಣೆ ಪ್ರಕರಣ: ರೈತರಿಗೆ ಪರಿಹಾರ

Lingaraj Badiger
Updated On : 2 Jan 2014, 11:10 am

ಕ.ಪ್ರ.ವಾರ್ತೆ, ಶಿರಾಳಕೊಪ್ಪ, ಜ.1
ಅಮ್ಮಾನ್ ಸೋನಾ ಬೆಳೆದಿದ್ದ ರೈತರಿಗೆ ಅನ್ಯಾಯವಾಗಿದೆ ಎಂದು ಉಡಗಣಿ ತಾಳಗುಂದ ಹೋಬಳಿ ರೈತಹೋರಾಟ ಸಮಿತಿ ಪೋಲೀಸ್ ಠಾಣೆ ಮೆಟ್ಟಲು ಏರಿ ನಂತರ ಹೋರಾಟ ಕೈಗೊಳ್ಳುವದಾಗಿ ಪತ್ರಿಕೆ ಮೋರೆ ಹೋದ ಹಿನ್ನೆಲೆಯಲ್ಲಿ ವಿತರಕರು ಕೊನೆಗೂ ತಪ್ಪಿನ ಅರಿವಾಗಿ ರೈತರಿಗೆ ಪರಿಹಾರ ನೀಡಿದ್ದಾರೆ.
ಅಮ್ಮಾನ್ ಸೋನಾ ಕಳಪೆ ಬತ್ತ ವಿತರಿಸಿದ್ದ ವಿತರಕರ ಬಗ್ಗೆ ಕಳೆದ ಕೆಲವು ದಿನಗಳ ಹಿಂದೆ ಕನ್ನಡಪ್ರಭ ಪತ್ರಿಕೆಯಲ್ಲಿ ಹಲವು ಬಾರಿ ವರದಿ ಪ್ರಕಟವಾದ ಪರಿಣಾಮ ರೈತರ ಪಾಕೆಟಿಗೆ ರು. 3,000 ಪರಿಹಾರ ದೊರಕಿದಂತಾಗಿದೆ.
ಶಿರಾಳಕೊಪ್ಪ ನಾಡಕಚೇರಿಯಲ್ಲಿ ಬುಧವಾರ ಪರಿಹಾರ ಪಡೆದ ರೈತ ಬಿಳಕಿ ಗ್ರಾಮದ ಶಿವಪ್ಪ, ನೂರಾರು ರೈತರಿಗೆ ಉಪತಹಸೀಲ್ದಾರ್ ಅವರಿಗೆ ನಾಡಕಚೇರಿಯಲ್ಲಿ ಸಿಹಿ ಹಂಚಿ ಸಂತೋಷ ವ್ಯಕ್ತಪಡಿಸಿದರು.
ಹಾಗೆಯೇ ಉಡಗಣಿ- ತಾಳಗುಂದ ರೈತ ಹೋರಾಟ ಸಮಿತಿಯ ರಾಜಣ್ಣ, ಹಿರಿಯ ರೈತ ಮುಖಂಡ ಮಾಳಗೊಂಡನಕೊಪ್ಪ ವೀರಣ್ಣ ಮತ್ತು ಪರಿಹಾರ ಪಡೆದ ರೈತರು ಪತ್ರಿಕೆಯೊಂದಿಗೆ ಮಾತನಾಡಿ, ಪತ್ರಿಕೆ ತಮಗೆ ಸಹಕರಿಸಿದ್ದನ್ನು ಸ್ಮರಿಸಿದರು.
ವಿವರ: ಕಳೆದ ಮಳೆಗಾಲದಲ್ಲಿ ಶಿರಾಳಕೊಪ್ಪ ಪಟ್ಟಣದ ಹಲವಾರು ಬೀಜ ಮಾರಾಟ ಅಂಗಡಿಯಲ್ಲಿ ಈ ಭಾಗದ ರೈತರು ಅಮ್ಮಾನ್ ಸೋನಾ ಬತ್ತ ಬೆಳೆಯಲೆಂದು ಬೀಜ ಖರೀದಿಸಿದ್ದರು. ಅಮ್ಮಾನ್ ಸೋನಾ ಬತ್ತಕ್ಕೆ ಹೆಚ್ಚು ಬೆಲೆ ಎಂಬ ಕಾರಣಕ್ಕೆ ಬೆಳೆಯಲು ಮುಂದಾದ ರೈತರಿಗೆ ಬೆಳೆ ಬಂದಾಗ ಅದು ಅಮ್ಮಾನ್ ಸೋನಾ ಬತ್ತ ಅಲ್ಲ ಎಂದು ತಿಳಿದು ಪತ್ರಿಕೆಗೆ ತಿಳಿಸಿದ್ದರು.
ನಂತರ ಪೊಲೀಸ್ ಠಾಣೆಗೆ ದೂರು ನೀಡಿದಾಗ ಎಸ್‌ಐ ಗುರುಪ್ರಸಾದ್ ವಿತರಕರೊಂದಿಗೆ ಮಾತುಕತೆ ನಡೆಸಿ ರೈತರ ಸಮಸ್ಯೆ ತಕ್ಷಣ ಬಗೆಹರಿಸುವಂತೆ ತಿಳಿಸಿದ್ದರು.
ರು. 3,000 ಪರಿಹಾರ: ಆದರೆ ವಿತರಕರು ಬಾರದ ಕಾರಣ ಪತ್ರಿಕೆ ಮುಖಾಂತರ ರೈತರು ಹೋರಾಟದ ಮಾರ್ಗಹಿಡಿಯಲು ಮುಂದಾದಾಗ ಕೊನೆಗೆ ದಿ.31ರಂದು ಸಂಜೆ ರೈತರೊಂದಿಗೆ ಹೊಂದಾಣಿಕೆ ಮಾಡಿಕೊಂಡು ರೈತರಿಗೆ ಪಾಕೇಟ್ ಒಂದಕ್ಕೆ ರು. 3,000 ಕೊಡಲು ಒಪ್ಪಿ ಹಣ ಕೊಡುವುದರೊಂದಿಗೆ ಸಮಸ್ಯೆ ಬಗೆಹರಿಯಿತು ಎಂದು ರೈತ ಮುಖಂಡರು ಪತ್ರಿಕೆಗೆ ತಿಳಿಸಿದ್ದಾರೆ.
ರೈತರಿಗೆ ಈ ಕಳಪೆ ಬತ್ತ ಬೆಳೆದ ಕಾರಣ ಕ್ವಿಂಟಲ್‌ಗೆ ಕನಿಷ್ಠ ರು. 2000 ನಷ್ಟ ಸಂಭವಿಸಿದೆ. ಆದರೂ ರೈತರು ಸಮಸ್ಯೆ ಬಗೆಹರಿಯಲೆಂದು ಸಣ್ಣ ಪರಿಹಾರಕ್ಕೆ ಒಪ್ಪಿದ್ದಾರೆ ಎಂದು ತಿಳಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement