ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಮೂಲ ವಿಜ್ಞಾನದಲ್ಲಿ ಹಿಂದುಳಿದಿರುವ ಭಾರತ'

Lingaraj Badiger
Updated On : 3 Jan 2014, 10:54 am

ಕ.ಪ್ರ. ವಾರ್ತೆ, ಶಿವಮೊಗ್ಗ, ಜ.2
ಮುಂದಿನ ದಶಕಗಳಲ್ಲಿ ಯಾವ ದೇಶ ಮೂಲ ವಿಜ್ಞಾನದಲ್ಲಿ ಹೆಚ್ಚಿನ ಜ್ಞಾನ ಸಂಪಾದಿಸುವುದೋ ಆ ದೇಶ ಆರ್ಥಿಕವಾಗಿಯೂ ಪ್ರಗತಿ ಸಾಧಿಸಿ ಮುಂಚೂಣಿ ಸ್ಥಾನಕ್ಕೆ ಬರುತ್ತದೆ.
ಇದನ್ನು ಯೋಚಿಸಿದ ಭಾರತ ಸರ್ಕಾರ ಕಳೆದ ದಶಕದಲ್ಲಿ ಅಂತರಾಷ್ಟ್ರೀಯ ಮಟ್ಟದ ಹಲವಾರು ವಿಜ್ಞಾನ ಸಂಶೋಧನಾ ಸಂಸ್ಥೆಗಳನ್ನು ಪ್ರಾರಂಭಿಸಿದೆ. ಆದರೆ ಇದರಲ್ಲಿ ಸಂಶೋಧನೆ ನಡೆಸಲು ಪ್ರತಿಭಾವಂತ ವಿಜ್ಞಾನಿಗಳ ಕೊರತೆ ಕಾಡುತ್ತಿದೆ ಎಂದು ಭಾರತೀಯ ವಿಜ್ಞಾನ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ ವಿಜ್ಞಾನಿ ಡಾ. ಎಲ್.ಎನ್. ಶಶಿಧರ್ ಹೇಳಿದರು.
ಇನ್‌ಸ್ಪೈಯರ್ ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಭಾರತ ದೇಶ ಸ್ವತಂತ್ರ ನಂತರದಲ್ಲಿ ಆಹಾರದ ವಿಷಯದಲ್ಲಿ ಸ್ವಾವಲಂಬನೆ ಗಳಿಸಿದೆ.
ಬಾಹ್ಯಾಕಾಶ ಸಂಶೋಧನೆಯಲ್ಲೂ ಮುಂಚೂಣಿಯಲ್ಲಿದೆ. ಆದರೆ ಮೂಲಭೂತ ವಿಜ್ಞಾನ ಸಂಶೋಧನೆಯಲ್ಲಿ ಹೆಚ್ಚಿನ ಪ್ರಗತಿಯಾಗಿಲ್ಲ ಎಂದರು.
ಮೂಲಭೂತ ವಿಜ್ಞಾನಕ್ಕೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಆಕರ್ಷಿಸಲು ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯು ಇನ್ಸ್ಪೈಯರ್ ಎಂಬ ವಿಶಿಷ್ಟ ಯೋಜನೆಯನ್ನು ರೂಪಿಸಿದೆ.
ಇದರಲ್ಲಿ ವರ್ಷಕ್ಕೆ ಸುಮಾರು 25 ಸಾವಿರ ವಿದ್ಯಾರ್ಥಿಗಳಿಗೆ ದೇಶಾದ್ಯಂತ ಕಾರ್ಯಾಗಾರ ನಡೆಸಿ ವಿಜ್ಞಾನಿಗಳೊಡನೆ ಸಂವಾದ ಮತ್ತಿತರ ಕಾರ್ಯಕ್ರಮಗಳಿಂದ ಇವರನ್ನು ಮೂಲಭೂತ ವಿಜ್ಞಾನಕ್ಕೆ ಆಕರ್ಷಿಸಲು ಪ್ರಯತ್ನ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಉನ್ನತ ಸಾಧನೆ ನಿರೀಕ್ಷೆ: ಪದವಿ ಹಂತದಲ್ಲಿ ವಾರ್ಷಿಕ 80 ಸಾವಿರ ಮತ್ತು ಪಿಎಚ್‌ಡಿ ಹಂತದಲ್ಲಿ ತಿಂಗಳಿಗೆ 27000 ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
ಈ ಪ್ರಯತ್ನಗಳಿಂದ ಮುಂದೆ ನಮ್ಮ ದೇಶದಲ್ಲಿ ವಿಜ್ಞಾನ ಸಂಶೋಧನೆಯಲ್ಲಿ ಉನ್ನತ ಸಾಧನೆ ಮಾಡಲಾಗುವುದೆಂದು ನಿರೀಕ್ಷಿಸಲಾಗಿದೆ ಎಂದರು.
ಜೆ.ಎನ್.ಎನ್. ಎಂಜಿನಿಯರಿಂಗ್ ಕಾಲೇಜು ಪ್ರಭಾರ ಪ್ರಾಂಶುಪಾಲ ಡಾ. ಎ.ವಿ. ಪ್ರದೀಪ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement