ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಶಂಕು ಸ್ಥಾಪನೆ

Rashmi Kasaragodu
Updated On : 4 Jan 2014, 11:31 am

ಶಿರಾಳಕೊಪ್ಪ: ಕುಡಿಯುವ ನೀರಿನ ಸಮಸ್ಯೆ ನಿವಾರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರದ ಸಹಕಾರದೊಂದಿಗೆ ಬೆಲವಂತನಕೊಪ್ಪ ಗ್ರಾಮದಲ್ಲಿ 25 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಜಿಪಂ ಸದಸ್ಯ ರುದ್ರಪ್ಪ ದಾನೇರ್ ತಿಳಿಸಿದರು.
ಶಿರಾಳಕೊಪ್ಪ ಹೊರವಲಯದ ತಡಗಣಿ ಗ್ರಾ.ಪಂ. ವ್ಯಾಪ್ತಿಗೆ ಬರುವ ಬೆಲವಂತನಕೊಪ್ಪ ಗ್ರಾಮದಲ್ಲಿ ಸಾರ್ವಜನಿಕ ಆಸ್ಪತ್ರೆ ಬಳಿ ಟ್ಯಾಂಕ್ ನಿರ್ಮಿಸಲು  ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಈ ಜಿ.ಪಂ ಕ್ಷೇತ್ರಕ್ಕೆ 1.50 ಕೋಟಿ ಅನುದಾನ ದೊರೆತಿದೆ. ಅದರಲ್ಲಿ ಬೆಲವಂತನಕೊಪ್ಪ ಗ್ರಾಮಕ್ಕೆ 25 ಲಕ್ಷ ಮಂಜೂರು ಮಾಡಿರುವುದಾಗಿ ತಿಳಿಸಿದರು. ಹಾಗೆಯೇ ಇಲ್ಲಿಗೆ ಹತ್ತಿರದ ತೊಗರ್ಸಿ ಜಿ.ಪಂ. ಕ್ಷೇತ್ರದಲ್ಲಿ ಹರಗಿ, ತೊಗರ್ಸಿ, ಕಣಸೋಗಿ, ಕೊಳಗಿ, ಚಿಕ್ಕಮಾಗಡಿ ಗ್ರಾಮಗಳಿಗೂ 25 ಲಕ್ಷ ವೆಚ್ಚದಲ್ಲಿ ಕುಡಿಯುವ ನೀರಿನ ಯೋಜನೆ ಕೈಗೊಳ್ಳಲಾಗಿದೆ. ಹಾಗೆಯೇ ನೀರು ಸರಬುರಾಜು ಮಾಡಲು ಬೋರ್ ವೆಲ್ ಹಾಗೂ ಪೈಪ್ಲೈನ್ ವ್ಯವಸ್ಥೆ ಮಾಡಲಾಗುವದು ಎಂದರು.
ಗ್ರಾಪಂ ಸದಸ್ಯ ನೇರಲಗಿ ಸತೀಶ್ ಗೌಡ, ಹಾಲೇಶ್, ಶಾಲಾ ಸಮಿತಿ ಅಧ್ಯಕ್ಷೆ ಶ್ರೀಮತಿ ದೀಪ ಹಾಗೂ ಹಲವಾರು ಪ್ರಮುಖರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement