ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನದಿಗೆ ಹಾರಿದ ಗೃಹಿಣಿಯ ರಕ್ಷಣೆ

Rashmi Kasaragodu
Updated On : 4 Jan 2014, 11:25 am

ಶಿವಮೊಗ್ಗ: ವಿವಾಹಿತೆ ಮಹಿಳೆಯೊಬ್ಬರು ತುಂಗಾ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ನಗರದ ಹೊಳೆ ಬಸ್ ನಿಲ್ದಾಣದ ಬಳಿ ನಡೆದಿದೆ.
ಬಾಪೂಜಿ ನಗರದ ನಿವಾಸಿಯಾದ ಮಹಿಳೆ ನಾಲ್ಕು ತಿಂಗಳ ಹಿಂದೆ ಚನ್ನಗಿರಿಯ ಯುವಕನೊಂದಿಗೆ ವಿವಾಹವಾಗಿದ್ದರು. ಶುಕ್ರವಾರ ಮನೆಯಿಂದ ಆಲ್ಕೋಳದ ಸಂಸ್ಥೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುವುದಾಗಿ ತಿಳಿಸಿದ್ದಾರೆ. ಆದರೆ, ಮಹಿಳೆ ಇಲ್ಲಿನ ಹೊಳೆ ಬಸ್ ನಿಲ್ದಾಣದ ಬಳಿ ಬಂದು ನೀರಿಗೆ ಹಾರಿದ್ದಾರೆ. ನಂತರ ಹೊಳೆಯಲ್ಲಿ ಸ್ನಾನ ಮಾಡತ್ತಿದ್ದ ಯುವಕರು ಯುವತಿಯನ್ನು ರಕ್ಷಣೆ ಮಾಡಿ ಸ್ಥಳೀಯ ಠಾಣೆಗೆ ಒಪ್ಪಿಸಿದ್ದಾರೆ. ಮಹಿಳೆಯು ಮಾನಸಿಕ ಖಿನ್ನತೆಗೆ ಒಳಗಾಗಿ ಈ ರೀತಿ ವಿಫಲ ಯತ್ನ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣ ಕೋಟೆ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement