ನಾಗರಾಜ ಗುತ್ತಿ
ಸೊರಬ: ಭದ್ರಾವತಿಯ ಮಿಲ್ಟ್ರಿ ಕ್ಯಾಂಪ್ನಲ್ಲಿ ಮೀಸಲು ಪಡೆಯ ಪೊ ಲೀಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗರಾಜ ಗುತ್ತಿ (52) ಹೃದಯಾಘಾತದಿಂದ ಗುರುವಾರ ರಾತ್ರಿ ನಿಧನರಾಗಿದ್ದಾರೆ. ಮೃತ ನಾಗರಾಜ ಗುತ್ತಿ ಸೊರಬ ಪಟ್ಟಣದ ನಿವಾಸಿಯಾಗಿದ್ದರು. ಹಲವು ವರ್ಷಗಳಿಂದ ಭದ್ರಾವತಿಯಲ್ಲಿರುವ ಪೊಲೀಸ್ ಮೀಸಲು ಪಡೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೃತರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಶುಕ್ರವಾರ ಪಟ್ಟಣದಲ್ಲಿ ಅಂತ್ಯಸಂಸ್ಕಾರ ನಡೆಯಿತು.