ಪರಿಹಾರಕ್ಕೆ ಆಗ್ರಹ
ಶಿವಮೊಗ್ಗ: ಮೆಸ್ಕಾಂ ನಿರ್ಲಕ್ಷ್ಯದಿಂದ ವಿದ್ಯುತ್ ಅವಘಡದಿಂದ ಬಲಗೈ ಕಳೆದುಕೊಂಡ ಬಾಲಕನಿಗೆ ಪರಿಹಾರ ನೀಡುವಂತೆ ಅಖಿಲ ಭಾರತ ದಲಿತ ಕ್ರಿಯಾ ಸಮಿತಿ ಒತ್ತಾಯಿಸಿದೆ. ತಾಲೂಕಿನ ಗಾಜನೂರು ಗ್ರಾಮದ ವಾಸಿ ವಿನಾಯಕ ಎಂಬ ಬಾಲಕ ಇಲ್ಲಿನ ಆಲದಮರದ ಬಳಿ ಆಟವಾಡುತ್ತಿದ್ದಾಗ ವಿದ್ಯುತ್ ತಂತಿ ತಗುಲಿ ಅವನ ಬಲಗೈ ತುಂಡಾಗಿದೆ. ಕೈ ಕಳೆದುಕೊಂಡಿರುವ ಬಾಲಕನ ಭವಿಷ್ಯ ಅಂತಂತ್ರವಾಗಿದೆ. ಈ ಘಟನೆಗೆ ಮೆಸ್ಕಾಂ ಅಧಿಕಾರಿಗಳೇ ನೇರ ಹೊಣೆ. ಘಟನೆ ನಡೆದು ಸುಮಾರು ಒಂದೂವರೆ ವರ್ಷ ಕಳೆದರೂ ಸಹ ಈ ಬಾಲಕನಿಗೆ ಮೆಸ್ಕಾಂನಿಂದ ಪರಿಹಾರ ದೊರೆತಿಲ್ಲ. ಆದರಿಂದ ಕೂಡಲೇ ಈ ಬಾಲಕನಿಗೆ ಸೂಕ್ತ ಪರಿಹಾರ ನೀಡುವಂತೆ ಮೆಸ್ಕಾಂನ್ನು ಸಂಘಟನೆ ಒತ್ತಾಯಿಸಿದೆ.