ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸ್ವಾತಂತ್ರ್ಯ ಹೋರಾಟಗಾರ್ತಿ ಬ್ಯಾಣಗಳಲೆ ಪದ್ಮಾವತಮ್ಮ ನಿಧನ

Rashmi Kasaragodu
Updated On : 4 Jan 2014, 11:24 am

ಹೊಸನಗರ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ್ತಿ ಬ್ಯಾಣಗಳಲೆ ಪದ್ಮಾವತಮ್ಮ (86) ಪಟ್ಟಣದ ಹೊರವಲಯದ ಬ್ಯಾಣಗಳಲೆಯಲ್ಲಿ ತಮ್ಮ ಸ್ವಗೃಹದಲ್ಲಿ ಶುಕ್ರವಾರ ನಿಧನರಾದರು.
ದೇಶ ಕಂಡ ಅಪರೂಪದ ದಂಪತಿ ಸ್ವಾತಂತ್ರ್ಯ ಹೋರಾಟಗಾರರು ಎಂಬ ಖ್ಯಾತಿಗೆ ಭಾಜನರಾಗಿದ್ದ ದಿವಂಗತ ನಾಗರಕೊಡಿಗೆ ಕೊಲ್ಲೂರಯ್ಯ ಇವರ ಪತ್ನಿ. ದಂಪತಿಗಳಿಬ್ಬರೂ ಮಹಾತ್ಮಾ ಗಾಂಧಿಯವರ ಕರೆಯ ಮೇರೆಗೆ ಸ್ವಾತಂತ್ರ್ಯ ಹೋರಾಟ ಹಾಗೂ ರಾಜವಂಶಸ್ಥರ ಆಡಳಿತದ ವಿರುದ್ಧ ಹೋರಾಡಿ ಜೈಲಿಗೆ ಹೋಗಿದ್ದರು. ನಂತರ ವಿನೋಭಾಭಾವೆಯ ಭೂದಾನ ಚಳವಳಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಮೃತರಿಗೆ ಮೂವರು ಪುತ್ರರು, ಐವರು ಪುತ್ರಿಯರು ಇದ್ದಾರೆ. ತಹಸೀಲ್ದಾರ್ ಚಿದಂಬರ ಕುಲಕಣರ್ ಸ್ವಾತಂತ್ರ್ಯ ಹೋರಾಟಗಾರ್ತಿ ಮನೆಗೆ ತೆರಳಿ ಸರ್ಕಾರಿ ಗೌರವ ಸಲ್ಲಿಸಿದರು. ಪದ್ಮಾವತಮ್ಮ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ನಿವಾಸಿಗಳು ತೆರಳಿ ಅಂತಿಮ ದರ್ಶನ ಪಡೆದರು.
ಸ್ವಗೃಹದ ಸಮೀಪದಲ್ಲೇ ಮೃತರ ಅಂತ್ಯಕ್ರಿಯೆ ನಡೆಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement