ಉಚಿತ ಹೀಲಿಂಗ್ ಶಿಬಿರ
ಶಿವಮೊಗ್ಗ: ಯೋಗಾಂಜಲಿ ಡಿವೈನ್ ಹೀಲಿಂಗ್ ಸೆಂಟರ್ ಮತ್ತು ಕರ್ನಾಟಕ ಬ್ಯಾಟರೀಸ್ ಆಶ್ರಯದಲ್ಲಿ ಜ.5ರಿಂದ ಬೆಳಿಗ್ಗೆ 10 ಗಂಟೆಗೆ ವಿನೋಬನಗರದ ಸಂಜೀವಿನಿ ಹಾಲ್ನಲ್ಲಿ ಉಚಿತ ಹೀಲಿಂಗ್ ಮತ್ತು ಯೋಗಾ ನಿದ್ರಾ ಶಿಬಿರ ಆಯೋಜಿಸಲಾಗಿದೆ. ಮನೋಸಮಸ್ಯೆಗಳಾದ ಮಾನಸಿಕ ಒತ್ತಡ, ಭಯ, ಖಿನ್ನತೆ, ನಕಾರತ್ಮಕ ಆಲೋಚನೆಗಳಿಂದ ಹೊರಬರಲು ಹಾಗೂ ಆತ್ಮವಿಶ್ವಾಸ ವೃದ್ಧಿಸಲು ಶಿಬಿರ ಸಹಕಾರಿಯಾಗಲಿದೆ ಎಂದು ಯೋಗಾಂಜಲಿ ಸಂಸ್ಥೆಯ ಎಸ್. ಶಶಿಧರ್ ತಿಳಿಸಿದ್ದಾರೆ. ವಿವರಗಳಿಗಾಗಿ- 8884251298.
ಪದಾಧಿಕಾರಿಗಳ ಆಯ್ಕೆ: ಮಾಹಿತಿ ಹಕ್ಕು ಮತ್ತು ಮಾನವ ಹಕ್ಕು ಸಂರಕ್ಷಣಾ ವೇದಿಕೆಗೆ ಪದಾಧಿಕಾರಿಗಳ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎಸ್.ಎನ್. ಫಜ್ಲುದ್ದೀನ್, ಉಪಾಧ್ಯಕ್ಷರಾಗಿ ಎಂ. ಅಣ್ಣಪ್ಪ, ಸಿ.ವಿ. ರುದ್ರೇಶ್ ಆಯ್ಕೆಯಾಗಿದ್ದು, ಪ್ರಧಾನ ಕಾರ್ಯದರ್ಶಿಯಾಗಿ ಎಂ. ಸಿಕಂದರ್ ಬಾಷಾ, ಕಾರ್ಯದರ್ಶಿ ಎ.ಜಿ. ಯೋಗೇಂದ್ರಪ್ಪ, ಸಹ ಕಾರ್ಯದಶಿದ್ದಮ್ಮ, ಜಬೀನ, ನುಸರತ್, ಹುಸೇನ್, ಬಿ. ಸಂಜಯ್, ಎನ್. ಅಕ್ರಂಖಾನ್, ಎನ್. ಕ್ರಿಸ್ಟೋಫರ್ ಮತ್ತಿತರರು ನೇಮಕವಾಗಿದ್ದಾರೆ ಎಂದು ವೇದಿಕೆಯ ಪ್ರಧಾನ ಕಾರ್ಯದರ್ಶಿ ತಿಳಿಸಿದ್ದಾರೆ.