ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉಪನ್ಯಾಸ ಕಾರ್ಯಕ್ರಮ

Rashmi Kasaragodu
Updated On : 5 Jan 2014, 12:42 pm

ಶಿವಮೊಗ್ಗ: ರೋಟರಿ ಶಿವಮೊಗ್ಗ ಪೂರ್ವ, ರೋಟರಿ ಪೂರ್ವ ವಿದ್ಯಾಸಂಸ್ಥೆ, ಮೈಸೂರು ಚೈತನ್ಯ ಧ್ಯಾನ ಕೇಂದ್ರ ಆಶ್ರಯದಲ್ಲಿ ಜ.6ರಿಂದ ಬೆಳಿಗ್ಗೆ 10.30ಕ್ಕೆ ರಾಜೇಂದ್ರ ನಗರದ ರೋಟರಿ ಪೂರ್ವ ಶಾಲೆ ಆವರಣದಲ್ಲಿ 1ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ಆಯೋಜಿಸಿದೆ. ಮೈಸೂರಿನ ಚೈತನ್ಯ ಧ್ಯಾನ ಕೇಂದ್ರದ ಖ್ಯಾತ ಶಿಕ್ಷಣ ತಜ್ಞೆ ಜಿ. ಮನೋರಮಾ ಅವರಿಂದ ವಿದ್ಯಾರ್ಥಿಗಳಿಗೆ ನೆನಪಿನ ಶಕ್ತಿ ವೃದ್ಧಿಸಿಕೊಳ್ಳುವ ಬಗ್ಗೆ, ಏಕಾಗ್ರತೆ, ಪರೀಕ್ಷಾ ಸಿದ್ದತೆ, ಪರೀಕ್ಷಾ ಭಯ ನಿವಾರಣೆ, ಓದಿಗೂ ಹಾಗೂ ಅಧ್ಯಾಯನಕ್ಕೂ ಇರುವ ವ್ಯತ್ಯಾಸ ಮತ್ತು ಆತ್ಮ ವಿಶ್ವಾಸ ಬೆಳಿಸಿಕೊಳ್ಳುವ ಬಗ್ಗೆ ಉಪನ್ಯಾಸ ನೀಡುವರು. ಉದ್ಘಾಟನೆಯನ್ನು ಆಲ್ಟರ್ನೇಟ್ ಸಿಸ್ಟಂ ಆಫ್ ಮೆಡಿಸಿನ್‌ನ  ಡಾ. ಸಿ.ಎಸ್. ಕೃಷ್ಣಮೂರ್ತಿ ನೆರವೇರಿಸುವರು. ಮುಖ್ಯಅತಿಥಿಯಾಗಿ ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಜಿ. ವಿಜಯಕುಮಾರ್, ಎಸ್. ಗಣೇಶ್ ಪ್ರಸಾದ್, ರೋಟರಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಎಲ್. ಪ್ರತಾಪ್, ರೋಟರಿ ಶಿವಮೊಗ್ಗ ಪೂರ್ವದ ಕಾರ್ಯದರ್ಶಿ ಪ್ರಸನ್ನಕುಮಾರ್ ಪಾಲ್ಗೊಳ್ಳುವರು. ಅಧ್ಯಕ್ಷತೆ ರೋಟರಿ ಪೂರ್ವ ಅಧ್ಯಕ್ಷ ಪುರುಷೋತ್ತಮ್ ವಹಿಸುವರು.
ಅಂತಿಮ ಆಯ್ಕೆ ಪಟ್ಟಿ ಪ್ರಕಟ
ಶಿವಮೊಗ್ಗ: ಪ್ರಸಕ್ತ ಶೈಕ್ಷಣಿಕ ಸಾಲಿನ ಬಿ.ಇಡಿ., ಕೋರ್ಸಿನ ದಾಖಲಾತಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂಸ್ಥೆ ಹಂಚಿಕೆಯಾದ ಬಗ್ಗೆ ಕೇಂದ್ರೀಕೃತ ದಾಖಲಾತಿ ಘಟಕದಿಂದ ಬಂದಿರುವ ಅಂತಿಮ ಆಯ್ಕೆಪಟ್ಟಿಯನ್ನು ಶಿವಮೊಗ್ಗ ಡಯಟ್‌ನ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ. ಹಂಚಿಕೆಯಾದ ಸಂಸ್ಥೆ ಒಪ್ಪಿಗೆ ಇದ್ದಲ್ಲಿ ಅಭ್ಯರ್ಥಿಗಳು ದಾಖಲಾತಿಗೆ ಅವಶ್ಯವಿರುವ ಎಲ್ಲಾ ಮೂಲ ದಾಖಲೆಗಳನ್ನು ಜನವರಿ 4 ರಿಂದ 10ರೊಳಗಾಗಿ ಪರಿಶೀಲನೆಗೆ ಒಪ್ಪಿಸಿ, ಶುಲ್ಕಪಾವತಿಸಿ ದಾಖಲಾತಿ ಪತ್ರ ಪಡೆಯುವುದು. ವಿವರಗಳಿಗೆ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಸಂಪರ್ಕಿಸಿ.
ಅಹವಾಲು ಸ್ವೀಕಾರ
ಶಿವಮೊಗ್ಗ: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಅಧಿಕಾರಿಗಳು ಜ. 6ರಂದು ಬೆಳಿಗ್ಗೆ 11ರಿಂದ 1ರವರೆಗೆ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣ, ಮಧ್ಯಾಹ್ನ 1.30ರಿಂದ 5ರವರೆಗೆ ಹೊಸನಗರ ತಾಲೂಕಿನ ನಗರ ಪಪಂನಲ್ಲಿ ಹಾಜರಿದ್ದು, ಅಹವಾಲುಗಳನ್ನು ಸ್ವೀಕರಿಸಲಿದ್ದಾರೆ. ಸಾರ್ವಜನಿಕರು ಸರ್ಕಾರಿ ಕಚೇರಿಗಳಲ್ಲಿ ತಮ್ಮ ಕೆಲಸಗಳ ಕುರಿತು ಆಗುತ್ತಿರುವ ವಿಳಂಬ, ಮತ್ತಿತರ ಸಮಸ್ಯೆಗಳಿದ್ದಲ್ಲಿ ನಿಗದಿತ ದಿನಾಂಕ, ಸಮಯ ಮತ್ತು ಸ್ಥಳಗಳಲ್ಲಿ ಖುದ್ದಾಗಿ ದೂರುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದಾಗಿದೆ ಎಂದು ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement