ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೀವ ಉಳಿಸುವ ಪೋಲಿಯೋ ಲಸಿಕೆ

Rashmi Kasaragodu
Updated On : 5 Jan 2014, 12:38 pm

ಶಿವಮೊಗ್ಗ: ಪೋಲಿಯೋ ಲಸಿಕೆ ಮನುಕುಲದ ಬದಲಾವಣೆಗೆ ಕಾರಣವಾದ ಪ್ರಕ್ರಿಯೆ ಎಂದು ರಾಷ್ಟ್ರೀಯ ಪಲ್ಸ್ ಪೋಲಿಯೋ ಸಮಿತಿ ಉಪಾಧ್ಯಕ್ಷ ಡಾ. ಪಿ.ನಾರಾಯಣ ಹೇಳಿದರು. ರೋಟರಿ ಕ್ಲಬ್ ಶಿವಮೊಗ್ಗ ಮಿಡ್‌ಟೌನ್ ನಗರದ ರೋಟರಿ ರಕ್ತನಿಧಿ ಸಭಾಂಗಣದಲ್ಲಿ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕುರಿತ ಕಾರ್ಯಾಗಾರದಲ್ಲಿ ಅವರು, ಪೋಲಿಯೋ ಲಸಿಕೆಯಿಂದ 1 ಕೋಟಿಗೂ ಅಧಿಕ ಮಕ್ಕಳು ಅಂಗವಿಕಲತೆಯಿಂದ ಪಾರಾಗಿದ್ದಾರೆ. ಆರೋಗ್ಯ ವೃದ್ಧಿಸಿಕೊಂಡಿದ್ದಾರೆ. 15 ಲಕ್ಷ ಮಕ್ಕಳ ಜೀವ ಉಳಿಸಿದೆ ಎಂದು ವಿವರಣೆ ನೀಡಿದರು. ಜಿಲ್ಲಾ ರಕ್ಷಣಾಧಿಕಾರಿ ಕೌಶಲೇಂದ್ರ ಕುಮಾರ್ ಮಾತನಾಡಿ, 2000 ಇಸವಿಯ ಆಸುಪಾಸಿನಲ್ಲೇ ದೇಶದಲ್ಲಿ ಪೋಲಿಯೋ ಪ್ರಕರಣ ಮುಕ್ತವಾಗಬೇಕಿತ್ತು. ಅದು ಸಾಧ್ಯವಾಗಿಲ್ಲ. ಅಂದರೆ 14 ವರ್ಷಗಳು ಹಿಂದಿದ್ದೇವೆ. ಸರ್ಕಾರ ಹಾಗೂ ಸಂಘ, ಸಂಸ್ಥೆಗಳ ಕಾರ್ಯವೈಖರಿಯಿಂದ ಇಂದು ಪೋಲಿಯೋ ಪ್ರಕರಣ ಕಡಿಮೆಯಾಗುತ್ತಿದೆ ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಿವಣ್ಣರೆಡ್ಡಿ ಮಾತನಾಡಿ, ಪೋಲಿಯೋ ಲಸಿಕೆ ಕಾರ್ಯಕ್ರಮಕ್ಕೆ ಜನತೆ ಸಹಕರಿಸಬೇಕು ಎಂದರು. ಉದ್ಯಮಿ ಡಿ.ಎಸ್. ಅರುಣ್, ಡಾ.ರಾಜೇಶ, ಡಾ. ಡಿ.ಎಂ.ಸತೀಶ್ ಚಂದ್ರ, ಕೆ.ಜಿ. ಶಿವಶಂಕರ್ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement