ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಹಿಳೆಯರಿಗೆ ತರಬೇತಿ ಕಾರ್ಯಕ್ರಮ

Rashmi Kasaragodu
Updated On : 5 Jan 2014, 12:39 pm

ಶಿವಮೊಗ್ಗ: ನವಿಲೆಯ ಕೃಷಿ ವಿಜ್ಞಾನ ಕೇಂದ್ರ ಮತ್ತು ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯಕ್ರಮ ಯೋಜನೆ ಕುರಿತು ವಿಸ್ತರಣಾ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮ ಉದ್ಘಾಟಿಸಿದ ಶಿವಮೊಗ್ಗ ಮಲ್ಟಿಪರ್ಪಸ್ ಸೋಷಿಯಲ್ ಸರ್ವೀಸ್ ಸೊಸೈಟಿ ಯೋಜನಾ ವ್ಯವಸ್ಥಾಪಕ ಸಲ್ವಡೋರ್ ಪೆರೇರಾ, ಹೊಸನಗರ, ಶಿಕಾರಿಪುರ ತಾಲೂಕಿನ ಒಟ್ಟು 10 ಗ್ರಾಪಂಗಳಿಂದ 100 ಸ್ವಸಹಾಯ ಸಂಘಗಳ ಮಹಿಳಾ ಸದಸ್ಯರಿಗೆ ಮಹಿಳಾ ಸಬಲೀಕರಣ ಕುರಿತು ಅನೇಕ ಯೋಜನೆಗಳನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು. ಮಹಿಳೆಯರು ಆರ್ಥಿಕವಾಗಿ ಮುಂದುವರೆಯುವಂತೆ ಅವರಿಗೆ ಸಂಘಗಳಲ್ಲಿ ಪುಸ್ತಕಗಳ ನಿರ್ವಹಣೆ, ದಾಖಲಾತಿ ಮತ್ತು ಖಾತೆಗಳ ನಿರ್ವಹಣೆ, ಸಾಲ ಸೌಲಭ್ಯಗಳು ಇನ್ನಿತರೆ ವಿಷಯಗಳ ಕುರಿತ ತರಬೇತಿಯೊಂದಿಗೆ ತಮ್ಮ ಕುಟುಂಬಕ್ಕೆ ಬೇಕಾದ ತರಕಾರಿಯನ್ನು ಬೆಳೆಯುವ ಸಲುವಾಗಿ ಕೈತೋಟ ಕುರಿತು ತರಬೇತಿಯನ್ನೂ ಸಹ ನೀಡಲಾಗುತ್ತಿದೆ ಎಂದರು. ಶಿಕಾರಿಪುರ, ಹೊಸನಗರ ತಾಲೂಕಿನ ಒಟ್ಟು 20ಕ್ಕೂ ಅಧಿಕ ವಿಸ್ತರಣಾ ಕಾರ್ಯಕರ್ತರು ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ಕೆವಿಕೆ ಕಾರ್ಯಕ್ರಮ ಸಂಯೋಜಕ ಡಾ. ಬಿ.ಸಿ.ಹನುಮಂತಸ್ವಾಮಿ ವಹಿಸಿದ್ದರು. ವಿಷಯ ತಜ್ಞ, ಸಂಪನ್ಮೂಲ ವ್ಯಕ್ತಿ ಬಸವರಾಜ ಬೀರಣ್ಣವರ್, ಕೃಷಿ ವಿಜ್ಞಾನ ಕೇಂದ್ರದ ಸಿಬ್ಬಂದಿ, ಸಮಗ್ರ ಕೃಷಿ ಪದ್ಧತಿ ಯೋಜನೆಯ ಸಿಬ್ಬಂದಿ ಮತ್ತಿತರರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement