'ಅಂಗವೈಕಲ್ಯ ದೇಹಕ್ಕೇ ಹೊರತು ಮನಸ್ಸಿಗಲ್ಲ'
ಶಿವಮೊಗ್ಗ: ಅದೊಂದು ಮನಕಲುಕುವ ಕಾರ್ಯಕ್ರಮ. ವೇದಿಕೆಯಲ್ಲಿ ಆ ಸೇವೆ ಪಡೆಯುತ್ತಿದ್ದ ಫಲಾನುಭವಿಗಳ ಕಣ್ಣಂಚಲಿ ಸಣ್ಣದಾಗಿ ನೀರು ಜೀನುಗುತ್ತಿತ್ತು. ನೇರವಾಗಿ ಅಲ್ಲದಿದ್ದರೂ ಮನಸ್ಸಿನಲ್ಲೇ ಸಹಾಯ ಹಸ್ತ ಚಾಚಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಭಾವನೆ ಎದ್ದು ಕಾಣುತ್ತಿತ್ತು.
ಇದಕ್ಕೆಲ್ಲ ಸಾಕ್ಷಿಯಾಗಿದ್ದು ಭಾನುವಾರ ಭಗವಾನ್ ಮಹಾವೀರ್ ಜೈನ್ ಫೌಂಡೇಷನ್ ಭಾನುವಾರ ಸಂಜೆ ಕೋಟೆ ರಸ್ತೆಯ ಶ್ರೀ ಆದಿನಾಥ ಜೈನ ಭವನದಲ್ಲಿ ಆಯೋಜಿಸಿದ್ದ ಜೈಪುರ ಫುಟ್ ಕ್ಯಾಂಪ್ ನಲ್ಲಿ ಅಂಕವಿಕಲರಿಗೆ ಕೃತಕ ಕಾಲು ಜೋಡಣಾ ಕಾರ್ಯಕ್ರಮ.
ಮಕ್ಕಳು, ದೊಡ್ಡವರೆನ್ನದೇ ಎಲ್ಲರಿಗೂ ಕೃತ ಕಾಲುಗಳು, ವೀಲ್ ಚೇರ್, ಕ್ಯಾಲಿಪಸ್, ಕ್ರಾಚಸ್, ವಾಕರ್‌ಗಳನ್ನು ವಿತರಣೆ ಮಾಡಲಾಯಿತು. ಈ ಎಲ್ಲವನ್ನೂ ಪಡೆದ ಫಲಾನುಭವಿಗಳು ವೇದಿಕೆಯಲ್ಲಿ ಕೃತಜ್ಞತೆ ಸಲ್ಲಿಸಲಾಗದೆ, ಕಣ್ಣಂಚಲ್ಲೇ ಕೃತಜ್ಞತೆ ಅರ್ಪಿಸಿದರು.
ಪೋಲಿಯೋದಿಂದ ತನ್ನ ಎರಡು ಕಾಲುಗಳನ್ನು ಕಳೆದುಕೊಂಡು 6 ವರ್ಷ ಮಗುವಿಗೆ ಸಂಸ್ಥೆ ಕೃತಕ ಕಾಲುಗಳನ್ನು ನೀಡಿದಾಗ ವೇದಿಕೆಯಲ್ಲೇ ಸಂತೋಷದಿಂದ ಓಡಾಡುತ್ತಿದ್ದು ಎಲ್ಲರ ಮನ ಕಂಪಿಸಿತು. ಅಲ್ಲದೇ ಶ್ರೀ ಆದಿಚುಂಚನಗಿರಿ ಶ
ಾಲೆಯಲ್ಲಿ ಓದುತ್ತಿರುವ ಬಾಲಕಿಗೆ ಒಂದು ಕಾಲಿಲ್ಲ. ಆದರೆ, ಸಂಸ್ಥೆಯು ನೀಡಿದ ಕೃತಕ ಕಾಲಿನಿಂದ ಬಾಲಕಿ ಶಾಲೆಯ ವಾರ್ಷಿಕೋತ್ಸವದಲ್ಲಿ ನೃತ್ಯ ಪ್ರದರ್ಶಿಸುವರು ಎಂದು ಘೋಷಣೆ ಮಾಡಿದಾಗ ಕಾರ್ಯಕ್ರಮ ವೀಕ್ಷಣೆ ಮಾಡುತ್ತಿದ್ದ ಎಲ್ಲರೂ ಬಾಲಕಿಯನ್ನು ಕರೆದು ಶುಭವಾಗಲಿ ಎಂದು ಹಾರೈಸಿದರು.
ಇನ್ನೂ ಮಹಿಳೆಯೊಬ್ಬರು ಕೃತಕ ಕಾಲು ನೀಡಿದ ಗಣ್ಯರಿಗೆ ಧನ್ಯವಾದ ಅರ್ಪಿಸಲು ಧ್ವನಿವರ್ಧಕದ ಮುಂದೆ ಬಂದು ಮಾತನಾಡಲು ಪ್ರಾರಂಭಿಸಿ, ಕಾಲು ನೀಡಿದ ಎಲ್ಲರಿಗೂ ಋಣಿಯಾಗಿರುವೆ ಎನ್ನುವಾಗ ಕಣ್ಣಿನಲ್ಲಿ ನೀರು ಜೀನುಗುತ್ತಿತ್ತು.
ಸುಮಾರು 175ಕ್ಕೂ ಅಧಿಕ ಜನರಿಗೆ, ಮಕ್ಕಳಿಗೆ ಕೃತಕ ಕಾಲು, ವೀಲ್ ಚೇರ್‌ಗಳನ್ನು ವಿತರಣೆ ಮಾಡಲಾಯಿತು. ಇದಕ್ಕೆ ಆರ್ಥಿಕ ಸಹಾಯ ಮಾಡಿದ ಸಮುದಾಯದ ಎಲ್ಲರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.