ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅಪನಂಬಿಕೆಯಿಂದ ವಿನಾಶ: ಭಟ್

Lingaraj Badiger
Updated On : 6 Jan 2014, 10:49 am

ತ್ಯಾಗರ್ತಿ: ಮಾನವನು ಅಭಿವೃದ್ಧಿಯೊಂದಿಗೆ ಮೂಲನಂಬಿಕೆ ಕಳೆದುಕೊಂಡರೆ ವಿನಾಶದ ಅಂಚಿಗೆ ಹೋಗುವುದು ಖಚಿತ. ಮುಂದಿನ ಪೀಳಿಗೆಗೆ ಆದರ್ಶಪ್ರಾಯವಾಗಿರಬೇಕೆಂದು ಎಂದು ಸಮಾಜ ಸೇವಕ ಚಂದ್ರಶೇಖರ ಭಟ್ ಕರೆ ನೀಡಿದರು.
ಸಾಗರ ತಾಲೂಕಿನ ತ್ಯಾಗರ್ತಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೋದ್ಯೋಗ ಯೋಜನೆ ಬರೂರು ವಲಯ ಜ್ಞಾನದೀಪ ಪೃಥ್ವಿ- ಜ್ಞಾನ ವಿಕಾಸ ಸಂಸ್ಥೆ ಆಶ್ರಯದಲ್ಲಿ ಭಾನುವಾರ ನಡೆದ ನಂಬಿಕೆ ಮತ್ತು ನಡವಳಿಕೆ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ನಾವು ಬದುಕಿರುವುದು ಅಲ್ಪಕಾಲ. ಆದರೆ, ನಮ್ಮ ನಡವಳಿಕೆ ಸದಾ ಕಾಲ ಉಳಿಯುತ್ತದೆ. ನಮ್ಮ ಹಿಂದಿನ ಹತ್ತು ತಲೆಮಾರಿನ ನಂಬಿಕೆ ಕಾಯ್ದುಕೊಂಡು ಬಂದರೆ ಮುಂದಿನ ಹತ್ತು ತಲೆಮಾರಿಗೆ ಮುಂದುವರಿಯುತ್ತದೆ. ನಾವು ಮೆಟ್ಟಿದ ನೆಲ, ಕುಡಿಯುವ ನೀರು, ಉಸಿರಾಡುವ ಗಾಳಿ ಹಾಗೂ ಶಾಖ ಅಂದು ಇಂದು ಎಂದು ಹಾಗೇ ಇರುತ್ತದೆ. ಆದರೆ, ಮನುಷ್ಯರು ಮಾತ್ರ ತಮ್ಮತನ ಕಳೆದುಕೊಳ್ಳುತ್ತಾ ಅವನತಿಯತ್ತ ಸಾಗುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.ಈ ಸಂದರ್ಭದಲ್ಲಿ ರಂಗೋಲಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಹೊಸಂತೆ ಒಕ್ಕೂಟದ ಲಕ್ಷ್ಮೀನಾರಾಯಣ ಪ್ರಥಮ ಬಹುಮಾನ, ಸಿದ್ಧಿವಿನಾಯಕ ತೃತೀಯ ಬಹುಮಾನ ಪಡೆದರೆ ತ್ಯಾಗರ್ತಿ ಒಕ್ಕೂಟದ ಸಂಜೀವಿನಿ ದ್ವಿತೀಯ ಬಹುಮಾನ ಪಡೆದಿದ್ದಾರೆ.
---

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement