11ರಂದು ರಾಜ್ಯಮಟ್ಟದ ಸಮಾವೇಶ
ಭದ್ರಾವತಿ: ಚಿತ್ರದುರ್ಗದಲ್ಲಿ ಜ.11ರಂದು ನಡೆಯಲಿರುವ ರಾಜ್ಯಮಟ್ಟದ ವಾಲ್ಮೀಕಿ ನಾಯಕ ಸಮಾಜದ ಸಮಾವೇಶದಲ್ಲಿ ಭದ್ರಾವತಿ ತಾಲೂಕಿನ ನಾಯಕ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಭದ್ರಾವತಿ ನಗರ ಮಹರ್ಷಿ ವಾಲ್ಮೀಕಿ ನಾಯಕ ಸಂಘದ (ಪರಿಶಿಷ್ಟ ಪಂಗಡ) ಅಧ್ಯಕ್ಷ ಬಿ.ಎಂ. ಮಂಜಪ್ಪ ಹೇಳಿದ್ದಾರೆ. ಅಂದು ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ಬೆಳಗ್ಗೆ 11 ಗಂಟೆಗೆ ಸಮಾವೇಶ ಉದ್ಘಾಟನೆಗೊಳ್ಳಲಿದ್ದು, ಮಾಹಿತಿಗಾಗಿ ಬಿ.ಎಂ. ಮಂಜಪ್ಪ (9972703245) ಅಥವಾ ಎಂ.ಶೇಖರಪ್ಪ (9448383595) ಸಂಪರ್ಕಿಸಬಹುದು.