ನೀರಿನ ಮೀಟರ್ ಶುಲ್ಕ ಹೆಚ್ಚಳಕ್ಕೆ ವಿರೋಧ
ಶಿವಮೊಗ್ಗ: ಏಕಾಏಕಿ ನೀರಿನ ಮೀಟರ್ ಅಳವಡಿಕೆ ಶುಲ್ಕ ಹೆಚ್ಚಿಳ ವಿರೋಧಿಸಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಬೊಮ್ಮನಕಟ್ಟೆ ಆಶ್ರಯ ಬಡಾವಣೆ ಹಿತರಕ್ಷಣಾ ವೇದಿಕೆ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಮೊದಲು ನಗರಸಭೆ ಅಧ್ಯಕ್ಷರು ಹಾಗೂ ಆಯುಕ್ತರು 1,650 ಎರಡು ಕಂತುಗಳಲ್ಲಿ ಕಟ್ಟುವ ಅವಕಾಶ ಕಲ್ಪಿಸಿದ್ದರು. ಇದೀಗ ದಿಢೀರನೇ ಕಳೆದ 3 ದಿನದಿಂದ 2,150 ಕಟ್ಟಬೇಕೆಂದು ನಗರಸಭೆಯು ಬಡಾವಣೆಯಲ್ಲಿ ಪ್ರಚಾರ ಮಾಡುತ್ತಿದೆ. ಇದರ ಜತೆಗೆ 360 ಕಸ ವಿಲೇವಾರಿ ಶುಲ್ಕವನ್ನೂ ನಿಗದಿಪಡಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇವೆಲ್ಲವನ್ನೂ ಜನರು ಪಾವತಿಸಲು ಸಿದ್ಧರಿದ್ದಾರೆ. ಮೊದಲು ಬಡಾವಣೆಗೆ ಮೂಲಭೂತ ಸೌಕರ್ಯಗಳಾದ ಒಳಚರಂಡಿ, ರಸ್ತೆ, ಕುಡಿಯುವ ನೀರು ಪೂರೈಸಿ ಎಂದು ಆಗ್ರಹಿಸಿದ್ದಾರೆ. ಬಡತನ ರೇಖೆಗಿಂದ ಕೆಳಗಿವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಇಲ್ಲಿನ ನಿವಾಸಿಗಳಿಗೆ ರಿಯಾಯಿತಿ ದರದಲ್ಲಿ ನೀರಿನ ಮೀಟರ್ ಅಳವಡಿಸಿ ಎಂದರು.
ಕಾರ್ಯದರ್ಶಿ ಎಸ್.ಟಿ. ಪುರುಷೋತ್ತಮ್, ಮಂಜುನಾಥ್, ರಂಗಮ್ಮ, ರಾಜೇಶ್ವರಿ, ರಾಜೇಶ್, ಶೇಷ, ವೀಣಾ, ಸಂಜು ಹಜಾರೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.