ಬತ್ತ ರಸ್ತೆಗೆ ಸುರಿದು ಪ್ರತಿಭಟನೆ
ಶಿರಾಳಕೊಪ್ಪ: ಅನ್ನದಾತ ರೈತನೇ ಬತ್ತವನ್ನು ರಸ್ತೆಯಲ್ಲಿ ಹಾಕಿ ಖರೀದಿ ಕೇಂದ್ರದ ತಾರತಮ್ಯ ಪ್ರತಿಭಟಿಸಲು ಹೋಗಿ ಕೊನೆಗೆ ಛೀಮಾರಿ ಹಾಕಿಸಿಕೊಂಡ ಘಟನೆ ಮಂಗಳವಾರ ನಡೆಯಿತು.
ಡಿಸಿ ಬಂದುಹೋದ ಬೆನ್ನಲ್ಲೇ ಶಿರಾಳಕೊಪ್ಪ ಖರೀದಿ ಕೇಂದ್ರದಲ್ಲಿ ತಾವು ತಂದ ಬತ್ತ ಖರೀದಿಸದೇ ಹೊಸದಾಗಿ ತಂದ ಬತ್ತವನ್ನು ಲಾರಿಯಲ್ಲಿ ತುಂಬಿ ಸಾಗಿಸುತ್ತಿದ್ದಾರೆ ಹಾಗೂ ಸಾಗಾಣೆ ಸರಿಯಾಗಿ ಆಗುತ್ತಿಲ್ಲ ಎಂದು ಆಪಾದಿಸಿ ತಂಡಗುಂದ ಹಾಗೂ ಇತರ ಗ್ರಾಮದ ರೈತರು ಖರೀದಿ ಕೇಂದ್ರದಿಂದ ಬಸ್ಸುನಿಲ್ದಾಣ ವೃತ್ತದ ಜೋಡಿರಸ್ತೆಯಲ್ಲಿ ಕಿಮೀ ಉದ್ದ ಸುರಿದು ಖರೀದಿ ಕೇಂದ್ರದಲ್ಲಿ ಇತರ ರೈತರು, ಹಮಾಲಿಗಳು ಅವರನ್ನು ತರಾಟೆಗೆ ತೆಗೆದುಕೊಂಡರು.
ಖರೀದಿಸಿಲ್ಲ: ಚಂದ್ರಶೇಖರಪ್ಪಗೌಡ ಚಕ್ರಸಾಲಿ, ನಾಗಭೂಣಗೌಡ, ಕವಲಿ, ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ನಮಗೆ ಕಳೆದ ತಿಂಗಳು ಬತ್ತ ತರಲು ದಿನಾಂಕ ನಿಗದಿ ಪಡಿಸಲಾಗಿತ್ತು. ಆದರೆ ಈವರೆಗೂ ಖರೀದಿ ಮಾಡಲಾಗಿಲ್ಲ ಎಂದು ಆಪಾದಿಸಿದರು.
ಸ್ಥಳದಲ್ಲಿದ್ದ ರೈತರು ಮತ್ತು ಹಮಾಲರು ಪ್ರತಿಭಟನೆ ಮಾಡಿದವರಲ್ಲಿ ಕೆಲವರು ರೈತರ ಹೆಸರಲ್ಲಿ ಖರೀದಿ ಕೇಂದ್ರಕ್ಕೆ ಬತ್ತ ತಂದು ಮಾರಾಟ ಮಾಡುತ್ತಿದ್ದಾರೆ. ಹಾಗೆಯೇ ಹಲವಾರು ಬಾರಿ ಸುಮಾರು 700 ಚೀಲ ಖರೀದಿ ಕೇಂದ್ರಕ್ಕೆ ಹಾಕಿದ್ದಲ್ಲದೇ ಮತ್ತೆ ಜಗಳ ತೆಗೆದಿದ್ದಾರೆ ತಿರುಗಿ ಬಿದ್ದರು.
ಕ್ಷಮಾಪಣೆ ಕೇಳಿದರು: ತಮ್ಮ ಬತ್ತ ಖರೀದಿ ಮಾಡುತ್ತಿಲ್ಲವೆಂದು ಆಪಾದಿಸಿದ ರೈತರ ವಿರುದ್ಧ ರೈತರು ಮತ್ತು ಹಮಾಲಿಗಳು ತಿರುಗಿಬಿದ್ದು, ಅವರ ತಪ್ಪುಗಳನ್ನು ಸಾರ್ವಜನಿಕವಾಗಿ ತಿಳಿಸಿ, ಇವರಿಂದಲೇ ಇಲ್ಲಿ ಸಮಸ್ಯೆ ಆಗಿದೆ ಎಂದರು.
ನಂತರ ಹಮಾಲಿಗಳು ಪ್ರತಿಭಟನೆ ಮಾಡಿದ ರೈತರು ತಿನ್ನುವ ಅನ್ನವನ್ನು (ಭತ್ತವನ್ನು)ರಸ್ತೆಮೇಲೆ ಹಾಕಿ ತುಳಿಯುವಂತೆ ಮಾಡಿದ್ದಾರೆ ಆದ್ದರಿಂದ ತೂಕ ಮಾಡುವುದಿಲ್ಲ ವೆಂದು ಪಟ್ಟುಹಿಡಿದಾಗ ಪ್ರತಿಭಟನೆ ಮಾಡಿದ ರೈತರು ಕ್ಷಮಾಪಣೆ ಕೋರಿದರು.
ಆಕ್ರೋಶ: ಕಿಸಾನ್ ಶೆಲ್ ಜಿಲ್ಲಾ ಅಧ್ಯಕ್ಷ ನಗರದ ಮಹದೇವಪ್ಪ ವೇರ್ ಹೌಸ್ ಮ್ಯಾನೇಜರ್ ವೆಂಕಟೇಶ್ ಬೋವಿ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ನಿಮ್ಮ ಕಾರ್ಯವೈಖರಿಯಿಂದ ಸರ್ಕಾರಕ್ಕೆ ಕೆಟ್ಟಹೆಸರು ಬರುತ್ತದೆ ನೀವೇ ಸಮಸ್ಯೆ ಉಂಟು ಮಾಡುತ್ತಿದ್ದೀರಿ, ತಕ್ಷಣ ಖರೀದಿ ಕೇಂದ್ರದಲ್ಲಿಯ ಬತ್ತವನ್ನು ಖಾಲಿ ಮಾಡದಿದ್ದರೆ ಮುಖ್ಯಮಂತ್ರಿ ಅವರಿಗೆ ದೂರು ನೀಡಬೇಕಾದಿತು ಎಂದು ಎಚ್ಚರಿಸಿ, ಈ ಎಲ್ಲಾ ಕುತಂತ್ರಗಳು ಕೆಲ ಅಧಿಕಾರಿ ವರ್ಗದಿಂದ ನಡೆಯುತ್ತಿವೆ ಎಂದರು.