ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸೌಲಭ್ಯ ಬಳಸಿ ಹೆಚ್ಚು ಸೇವೆ ಸಲ್ಲಿಸಿ

Lingaraj Badiger
Updated On : 10 Jan 2014, 12:05 pm

ಕ.ಪ್ರ.ವಾರ್ತೆ  ಶಿಕಾರಿಪುರ  ಜ.9
ಆಧುನಿಕತೆಯ ವೇಗ ಎಲ್ಲಾ ಕ್ಷೇತ್ರವನ್ನು ಆವರಿಸಿದ್ದು, ಇದಕ್ಕೆ ಪೂರಕವಾಗಿ ಪ್ರತಿಯೊಬ್ಬರೂ, ತಮ್ಮ ಕ್ಷೇತ್ರದಲ್ಲಿನ ಆಧುನಿಕತೆ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಸಮಾಜಕ್ಕೆ ಹೆಚ್ಚಿನ ರೀತಿಯಲ್ಲಿ ಸೇವೆ ಸಲ್ಲಿಸುವ ಅಗತ್ಯವಿದೆ ಎಂದು ಇಲ್ಲಿನ ಜೆಎಂಎಫ್ ನ್ಯಾಯಾಲಯದ ಹಿರಿಯ ಶ್ರೇಣಿ ನ್ಯಾಯಧೀಶರಾದ ಶೋಭಾವತಿ ಹೇಳಿದರು.
ಗುರುವಾರ ಪಟ್ಟಣದ ಜೆಎಂಎಫ್ ನ್ಯಾಯಾಲದಲ್ಲಿನ ವಕೀಲರ ಭವನಕ್ಕೆ ಸಂಸದರ ಅನುದಾನದಲ್ಲಿ ಮಂಜೂರಾದ ರು. 3 ಲಕ್ಷ ವೆಚ್ಚದ ಗ್ರಂಥಾಲಯ, ಕಂಪ್ಯೂಟರ್ ಕೊಠಡಿ ಹಾಗೂ ಗಣಕೀಕರಣ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದರು.
ಮೌಲ್ಯಾಧಾರಿತ ಸಮಾಜ ನಿರ್ಮಾಣ: ನ್ಯಾಯವಾದಿಗಳು ಸದಾ ಲವಲವಿಕೆಯಿಂದ ಕಾರ್ಯನಿರ್ವಹಿಸಬೇಕಾಗಿದ್ದು, ಸದಾ ಚಟುವಟಿಕೆಯಿಂದಿರುವ ಹಿರಿಯ ನ್ಯಾಯವಾದಿಗಳು ಕಕ್ಷಿದಾರರಿಗೆ ನ್ಯಾಯ ಒದಗಿಸುವ ಮೂಲಕ ಕ್ರಿಯಾಶೀಲರಾಗಿ ವೈಯುಕ್ತಿಕ ಜೀವನವನ್ನು ಉಲ್ಲಾಸದಾಯಕವಾಗಿ ಕಳೆಯಲು ಸಾಧ್ಯ ಎಂದ ಅವರು ಇದರಿಂದಾಗಿ ಮೌಲ್ಯಾಧಾರಿತ ಸಮಾಜ ನಿರ್ಮಾಣವಾಗಲಿದೆ ಎಂದರು.
ಧರ್ಮವನ್ನು ರಕ್ಷಿಸಲು ಪಣ ತೊಟ್ಟಲ್ಲಿ ಧರ್ಮ ನಮ್ಮನ್ನು ಕಷ್ಟದ ಸಂದರ್ಭದಲ್ಲಿ ರಕ್ಷಿಸಲಿದೆ ಎಂದ ಅವರು ಕಿರಿಯ ನ್ಯಾಯವಾದಿಗಳು ಹಿರಿಯ ನ್ಯಾಯವಾದಿಗಳ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸಿದಲ್ಲಿ ವೃತ್ತಿ ಜೀವನ ಸುಲಭವಾಗಲಿದ್ದು ಎಂದರು.
ಆಧುನಕ ತಂತ್ರಜ್ಞಾನ: ಇದರೊಂದಿಗೆ ಆಧುನಿಕತೆಯ ವೇಗ ಎಲ್ಲಾ ಕ್ಷೇತ್ರವನ್ನು ಆವರಿಸಿದ್ದು, ನ್ಯಾಯವಾದಿಗಳು ತಮ್ಮ ವೃತ್ತಿ ಬದುಕಿನಲ್ಲಿ ಕಕ್ಷಿದಾರರಿಗೆ ನ್ಯಾಯ ದೊರಕಿಸಲು ಆಧುನಿಕ ತಂತ್ರಜ್ಞಾನವನ್ನು ಅವಲಂಬಿಸಬೇಕಾಗಿದೆ ಎಂದರು.
 ಗಣಕೀಕರಣ ಯಂತ್ರವನ್ನು ಸಂಪೂರ್ಣ ಸದುಪಯೋಗಪಡಿಸಿಕೊಂಡು ಇದರ ಸಹಾಯದಿಂದ ನಿತ್ಯ ಕಾನೂನಿನ ವೇಗದ ಬದಲಾವಣೆಯನ್ನು ವೃತ್ತಿ ಜೀವನದಲ್ಲಿ ಅಳವಡಿಸಿಕೊಳ್ಳುವ ಜತೆಗೆ ಗ್ರಂಥಾಲಯದಲ್ಲಿ ದೊರೆಯುವ  ನೂತನ ಪುಸ್ತಕಗಳನ್ನು ಅಭ್ಯಸಿಸಿ ಕಕ್ಷಿದಾರರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದರು.
ಜೆಎಂಎಫ್ ನ್ಯಾಯಾಲಯದ ಕಿರಿಯ ಶ್ರೇಣಿ ನ್ಯಾಯಾಧೀಶ ಜಗದೀಶ್ ಶಿವಪೂಜಿ ಗ್ರಂಥಾಲಯ ಕೊಠಡಿ ಉದ್ಘಾಟಿಸಿ, ನ್ಯಾಯವಾದಿಗಳಿಗೆ ಕಾನೂನಿನ ಬಗ್ಗೆ ಸಾಮಾನ್ಯ ತಿಳಿವಳಿಕೆಗೆ ಪುಸ್ತಕದ ಅಧ್ಯಯನ ಅತ್ಯವಶ್ಯಕವಾಗಿದ್ದು, ಇದರೊಂದಿಗೆ ವಿನೂತನ ಸಿ.ಡಿ. ಮತ್ತಿತರ ತಂತ್ರಜ್ಞಾನದಿಂದ ವಕಾಲತ್ತುಗಳನ್ನು ತೀಕ್ಷ್ಣವಾಗಿ ನಿರ್ವಹಿಸಲು ಸಾಧ್ಯ ಎಂದರು.
ತಾಲೂಕು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎನ್.ಬಿ ವಸಂತಪ್ಪ, ಕಾರ್ಯದರ್ಶಿ ಪ್ರಸನ್ನಕುಮಾರ್ ಮಾತನಾಡಿದರು. ಸಂಘದ ಉಪಾಧ್ಯಕ್ಷ ಪರಮೇಶ್ವರಪ್ಪ, ಖಜಾಂಚಿ ಬಸವಂತಪ್ಪ, ಹಿರಿಯ ನ್ಯಾಯವಾದಿ ವಸಂತಮಾಧವ, ಶಿವನಗೌಡ, ಶಿವಪ್ರಕಾಶ್, ಚಂದ್ರಪ್ಪ, ಕೆರೆಸ್ವಾಮಿಗೌಡ, ರವಿಕುಮಾರ್, ಕೊಟ್ರೇಶಪ್ಪ, ಯೋಗಾನಂದ, ಶಶಿಧರ ಸಂಡ, ರುದ್ರಪ್ಪಯ್ಯ, ದಾನೇಂದ್ರಪ್ಪ, ಪ್ರಭಾಕರ್,ಕೆ.ಪಿ. ಮಂಜುನಾಥ್, ದೇವರಾಜ್ ಮೊದಲಾದವರು ಉಪಸ್ಥಿತರಿದ್ದರು.
ಶ್ರೀಧರ್ ಪ್ರಾರ್ಥಿಸಿದರು. ಪರಮೇಶ್ವರಪ್ಪ ಸ್ವಾಗತಿಸಿದರು. ನಿಂಗಪ್ಪ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement