ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಣ್ಯ, ನೋಟು ಜೀವನದ ಮಾರ್ಗದರ್ಶಿ: ಕಾಗೋಡು

Lingaraj Badiger
Updated On : 11 Jan 2014, 11:10 am

ಶಿವಮೊಗ್ಗ:  ನಾಣ್ಯ ನೋಟುಗಳು ನಮ್ಮ ಪರಂಪರೆ, ಚರಿತ್ರೆಯನ್ನು ನೆನಪು ಮಾಡಿಕೊಡುತ್ತವೆ. ಜೊತೆಗೆ ಮುಂದಿನ ಜೀವನದ ಮಾರ್ಗದರ್ಶಿಯಾಗಿವೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.
ರಾಷ್ಟ್ರಮಟ್ಟದ ಅಂಚೆ ಚೀಟಿ, ನಾಣ್ಯ ಸಂಗ್ರಹ ಪ್ರದರ್ಶನ- ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ರಾಜರ ಕಾಲದ ವಿವಿಧ ಪ್ರದೇಶಗಳ ನಾಣ್ಯ, ನೋಟುಗಳ ಸಂಗ್ರಹಣೆ ಮಾಡುವುದು ಸುಲಭದ ಕೆಲಸವಲ್ಲ. ಇದಕ್ಕೆ ಸಾಕಷ್ಟು ಶ್ರಮ ಹಾಗೂ ಬದ್ಧತೆ ಅತ್ಯಗತ್ಯ. ಇಂತಹ ಅಪೂರ್ವ ಸಂಗ್ರಹವನ್ನು ನಗರದ ಜನತೆಗೆ ನೋಡುವ ಅವಕಾಶ ಕಲ್ಪಿಸಿರುವುದು ಶ್ಲಾಘನೀಯ ಎಂದರು.
ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ಮಾತನಾಡಿ, ಹಿಂದಿನ ಕಾಲದ ನಾಣ್ಯ ನೋಟುಗಳು ಮನುಷ್ಯನ ನಾಗರಿಕತೆ, ಬೆಳವಣಿಗೆಯನ್ನು ತಿಳಿಸುತ್ತವೆ. ಇಂತಹ ಅಪರೂಪದ ಪ್ರದರ್ಶನದಿಂದ ಇಂದಿನ ಯುವ ಪೀಳಿಗೆಗೆ ಚರಿತ್ರೆ ಪಾಠ ಹೇಳಿಕೊಟ್ಟಂತಾಗುವುದು ಎಂದರು.
ಸಂಸದ ಬಿ.ವೈ.ರಾಘವೇಂದ್ರ, ಸಂಘದ ಅಧ್ಯಕ್ಷ ದೇವದಾಸ್ ನಾಯಕ್, ಡಾ.ಮಲ್ಲೇಶ್ ಹುಲ್ಲಮನಿ, ಪ್ರಧಾನ ಕಾರ್ಯದರ್ಶಿ ಎಸ್.ಚಂದ್ರಕಾಂತ್, ವಿ.ಕೆ.ಜೈನ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement