ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಸಮರ್ಥ ಆಡಳಿತಕ್ಕೆ ಪ್ರಾಚಾರ್ಯರು ಆಧಾರ ಸ್ತಂಭ

Lingaraj Badiger
Updated On : 11 Jan 2014, 11:07 am

ಕ.ಪ್ರ.ವಾರ್ತೆ, ಶಿವಮೊಗ್ಗ, ಜ.10
ಶೈಕ್ಷಣಿಕ ಮತ್ತು ಆಡಳಿತವನ್ನು ಸಮರ್ಥವಾಗಿ ನಿರ್ವಹಿಸುವ ಸಾಮರ್ಥ್ಯವನ್ನು ನಿರೀಕ್ಷಿಸುವ ಪ್ರಾಚಾರ್ಯರ ಹುದ್ದೆ ರಾಜ್ಯದ ಪ್ರಗತಿ ವ್ಯವಸ್ಥೆಯಲ್ಲಿ ಅಪೂರ್ವವಾದುದು. ವಿಶ್ವವಿದ್ಯಾಲಯದ  ಶಕ್ತಿ ಮತ್ತು ಕಾಲೇಜುಗಳ ಆಧಾರಸ್ತಂಭ ಪ್ರಾಚಾರ್ಯರು ಎಂದು ಕುಲಪತಿ ಎಸ್.ಎ.ಬಾರಿ ಹೇಳಿದರು.
ಅವರು ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಹಿರೇಮಠ ಸಭಾಂಗಣದಲ್ಲಿ ಕಾಲೇಜು ಅಭಿವೃದ್ಧಿ ಪರಿಷತ್ತು ಏರ್ಪಡಿಸಿರುವ ಕುವೆಂಪು ವಿಶ್ವವಿದ್ಯಾಲಯ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಾಂಶುಪಾಲರ ಕಾರ್ಯಾಗಾರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿದ್ದ ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಸಿ.ಎಂ. ವಿವೇಕಾನಂದ ಮಾತನಾಡಿ, ಮಾಹಿತಿ ಸಂಪತ್ತನ್ನು ರವಾನಿಸಲು ತರಬೇತಿ ಬಹುಮುಖ್ಯ. ಈ ರೀತಿಯ ಕಾರ್ಯಾಗಾರಗಳ ಮೂಲಕ ಸಮಸ್ಯೆಯ ಮೂಲ ಕಾರಣ, ಪರಿಣಾಮಗಳನ್ನು ಅರ್ಥೈಸಿಕೊಂಡು ಕೆಲಸದ ಸಾಮರ್ಥ್ಯ ನಿರ್ವಹಿಸಲು ನೆರವಾಗುತ್ತವೆ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಎಚ್.ಎಸ್. ಭೋಜ್ಯಾನಾಯ್ಕ ಮಾತನಾಡಿ, ಅಧಿಕಾರ ವಿಕೇಂದ್ರಿಕರಣದ ಮೂಲಕ ಕೆಲಸದ ಭಾರ ಹಾಗೂ ಒತ್ತಡ ನಿವಾರಿಸಿಕೊಳ್ಳಲು ಸಾಧ್ಯವಾಗುತ್ತದೆ. ಇಂದಿನ ಪಾರದರ್ಶಕವಾದ ವ್ಯವಸ್ಥೆಯಲ್ಲಿ ಬಹು ಎಚ್ಚರಿಕೆಯಿಂದ ಕಾರ್ಯರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು.
ಕೀರ್ತಿ ಪ್ರಾರ್ಥಿಸಿದರು. ಕಾಲೇಜು ಅಭಿವೃದ್ಧಿ ಪರಿಷತ್ತು ನಿರ್ದೇಶಕ ಡಾ.ಬಿ. ಗಣೇಶ್ ಪ್ರಾಸ್ತಾವಿಕವಾಗಿಮಾತನಾಡಿದರು. ಆರ್. ಮಂಜುನಾಥ್ ವಂದಿಸಿದರು. ಡಾ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ನಿರೂಪಿಸಿದರು.
ಮೊದಲ ಗೋಷ್ಠಿಯಲ್ಲಿ ಪ್ರೊ. ಸಿ.ಎಂ. ವಿವೇಕಾನಂದ ಕಾಲೇಜು ಆಡಳಿತ ವ್ಯವಸ್ಥೆ, ಪ್ರಾಂಶುಪಾಲರ ಪಾತ್ರ ವಿಷಯ ಕುರಿತು, ಪ್ರೊ. ಎಚ್. ಎಸ್. ಭೋಜ್ಯಾನಾಯ್ಕ ಪರೀಕ್ಷಾ ಕಾರ್ಯದ ಸುಧಾರಣೆ, ಪ್ರಾಂಶುಪಾಲರ ಪಾತ್ರ ಕುರಿತು ವಿಚಾರ ಮಂಡಿಸಿದರು.
ಎರಡನೇ ಗೋಷ್ಠಿಯಲ್ಲಿ ಹಣಕಾಸು ಅಧಿಕಾರಿ ಪ್ರೊ. ಆರ್. ಹಿರೇಮಣಿನಾಯ್ಕ ವಿಶ್ವವಿದ್ಯಾಲಯಕ್ಕೆ ಕಾಲೇಜು ಪಾವತಿಸಬೇಕಾದ ಶುಲ್ಕದ ಬಗ್ಗೆ ಹಾಗೂ ಸಂಯೋಜನಾ ಪ್ರಕ್ರಿಯೆ, ಪ್ರಾಂಶುಪಾಲರ ಜವಾಬ್ದಾರಿ ಮತ್ತು ಪಾತ್ರ ಕುರಿತು ಡಾ.ಬಿ. ಗಣೇಶ್ ವಿಚಾರ ಮಂಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement