ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮತದಾನ ಜಾಗೃತಿಗೆ ಕ್ರಿಕೆಟ್ ಪಂದ್ಯಾವಳಿ

Rashmi Kasaragodu
Updated On : 12 Jan 2014, 12:50 pm

ಶಿವಮೊಗ್ಗ: ದೇಶಾದ್ಯಂತ ನಡೆಯುತ್ತಿರುವ 'ಖೇಲೇಗಾ ಯುವ- ಜೀತೇಗೆ ಭಾರತ್' ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಶಿವಮೊಗ್ಗದಲ್ಲೂ ಸಹ ಶನಿವಾರ ವಿದ್ಯುಕ್ತ ಚಾಲನೆ ದೊರೆಯಿತು. ಸ್ವಾಮಿ ವಿವೇಕಾನಂದ 150ನೇ ಜನ್ಮದಿನ ವರ್ಷಾಚರಣೆ ಅಂಗವಾಗಿ ನರೇಂದ್ರ ನಮನ್ ಕಾರ್ಯಕ್ರಮದ ಅಡಿಯಲ್ಲಿ ಈ ಕ್ರಿಕೆಟ್ ಪಂದ್ಯಾವಳಿ ನಡೆಯುತ್ತಿದ್ದು, ಜಿಲ್ಲಾ ಬಿಜೆಪಿ ಯುಮೋರ್ಚಾ ಪಂದ್ಯಾವಳಿಯನ್ನು ಅಚ್ಚುಕಟ್ಟಾಗಿ ರೂಪಿಸಿದೆ. ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ.ಬಿ. ಭಾನುಪ್ರಕಾಶ್, ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ, ಸಂಸದ ಬಿ.ವೈ. ರಾಘವೇಂದ್ರ, ವಿಧಾನ ಪರಿಷತ್ ಸದಸ್ಯ ಆರ್.ಕೆ. ಸಿದ್ದರಾಮಣ್ಣ ಮತ್ತಿತರರು ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ಪಿಚ್ಗೆ ಧಾವಿಸಿದ ಬಿಜೆಪಿ ಮುಖಂಡರು, ಸಾಂಕೇತಿಕವಾಗಿ ಬ್ಯಾಟ್ ಬೀಸಿ ಕ್ರೀಡಾಪಟು ಹುರಿದುಂಬಿಸಿದರು.
540 ಜಿಲ್ಲಾ ಕೇಂದ್ರಗಳಲ್ಲಿ: ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಭವಾನಿ ರಾವ್ ಮೋರೆ, ದೇಶದ 540 ಜಿಲ್ಲಾ ಕೇಂದ್ರಗಳಲ್ಲಿ ಪಂದ್ಯಾವಳಿ ನಡೆಯುತ್ತಿದ್ದು, ಪ್ರತಿ ಜಿಲ್ಲೆಯಲ್ಲಿ ಫೈನಲ್ ಪಂದ್ಯ ಗೆಲ್ಲುವ ಒಂದು ತಂಡವನ್ನು ರಾಜ್ಯಮಟ್ಟದ ನಡೆಯುವ ಪಂದ್ಯಾವಳಿಗೆ ಕಳುಹಿಸಲಾಗುತ್ತದೆ ಎಂದು ವಿವರಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement