ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ
ಭದ್ರಾವತಿ: ಶಿವಮೊಗ್ಗ ಜಿಲ್ಲಾ ದೇಹದಾರ್ಢ್ಯ ಸಂಸ್ಥೆ ದಶಮಾನೋತ್ಸವ ಅಂಗವಾಗಿ ಬೆಂಗಳೂರಿನ ರಾಜ್ಯ ದೇಹದಾರ್ಢ್ಯ ಸಂಸ್ಥೆಯ ಸಹಯೋಗದೊಂದಿಗೆ ಪಟ್ಟಣದ ವಿಐಎಸ್ಎಲ್ ಕ್ರೀಡಾಂಗಣದಲ್ಲಿ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆ 2014, ಮಿಸ್ಟರ್ ಇಂಡಿಯಾ ದೇಹದಾರ್ಢ್ಯ ಸ್ಪರ್ಧೆಗಳ ಆಯ್ಕೆ ಫೆ.1ರಂದು ಶನಿವಾರ ಆಯೋಜಿಸಿದೆ. ಮಿಸ್ಟರ್ ಕರ್ನಾಟಕ, ಮಿಸ್ಟರ್ ಕರ್ನಾಟಕ ಮಾಸ್ಟರ್- 2014, ವಿನ್ನರ್ ಟ್ರೋಫಿ ನೀಡಲಾಗುತ್ತದೆ ಎಂದು ಶಿವಮೊಗ್ಗ ಜಿಲ್ಲಾ ದೇಹದಾರ್ಢ್ಯ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಂತ್ ತಿಳಿಸಿದ್ದಾರೆ. ಫೆ.1ರಂದು ಬೆಳಗ್ಗೆ 9.30ರಿಂದ 12 ಗಂಟೆವರೆಗೆ ಪ್ರತಿ ವರ್ಗದಿಂದ 5 ಸ್ಪರ್ಧಾಳುಗಳ ಆಯ್ಕೆ ನಡೆಯುವುದು. ಆಯ್ಕೆಯಾದವರಿಗೆ ಸಂಜೆ 6 ಗಂಟೆಗೆ ವಿಐಎಸ್ಎಲ್ ಅಮೃತ ಮಹೋತ್ಸವ ರಂಗಮಂಟಪದಲ್ಲಿ ಅಂತಿಮ ಸ್ಪರ್ಧೆ ನಡೆಯುವುದು, ಬಹುಮಾನ ವಿತರಣೆ ಮಾಡಲಾಗುವುದು. ಏಕಲವ್ಯ ವಿಜೇತ ಅಂತಾರಾಷ್ಟ್ರೀಯ ದೇಹದಾರ್ಢ್ಯಪಟು ಪ್ರೀತಂ ಚೌಗಲೆ ಅವರಿಂದ ದೇಹದಾರ್ಢ್ಯ ಪ್ರದರ್ಶನವಿರುತ್ತದೆ. ಅಂದು ವೇಟ್ ಲಿಫ್ಟಿಂಗ್ ಏಕಲವ್ಯ ಪ್ರಶಸ್ತಿ ವಿಜೇತೆ ಎಸ್ಎಚ್. ಚಂದ್ರಾ ಶೌರಿದೇವಿ, ಪವರ್ ಲಿಫ್ಟರ್ ಶಿವಮೊಗ್ಗದ ಗೋಪಿ ಹಾಗೂ ಪ್ರೀತಮ್ ಚೌಗ್ಲೆ ಅವರಿಗೆ ಸನ್ಮಾನ ಮಾಡಲಾಗುವುದು. ಅಂಗವಿಕಲರಿಗೆ ಪ್ರತ್ಯೇಕ ಸ್ಪರ್ಧೆ ನಡೆಸಲಾಗುತ್ತದೆ.