ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿದ್ಯಾದೇವಿ ಕೃಪೆಗೆ ಶ್ರಮ ಅವಶ್ಯ

Rashmi Kasaragodu
Updated On : 12 Jan 2014, 12:49 pm

ಸಾಗರ: ಯಾವುದೇ ವಿದ್ಯೆ ಒಲಿಸಿಕೊಳ್ಳಲು ಕಠಿಣ ಪರಿಶ್ರಮ, ಶ್ರದ್ಧೆ ಅವಶ್ಯ ಎಂದು ಸುಗಮ ಸಂಗೀತ ಕಲಾವಿದ ಬೆಂಗಳೂರಿನ ನರಹರಿ ದೀಕ್ಷಿತ್ ಹೇಳಿದರು. ಇಲ್ಲಿನ ವೇದನಾದ ಪ್ರತಿಷ್ಠಾನ, ಶ್ರೀಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ವತಿಯಿಂದ 3 ದಿನಗಳ ಕಾಲ ಹಮ್ಮಿಕೊಂಡಿರುವ ಚತುರ್ದಶಿಯ ಸಂಗೀತೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಸಾಧನಾ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಸಂಗೀತೋತ್ಸವ ಉದ್ಘಾಟಿಸಿದ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಮಾತನಾಡಿ, ಸಂಗೀತ, ನಾಟ್ಯ ಚಟುವಟಿಕೆಗಳ ಅಭಿರುಚಿ ಮಕ್ಕಳಲ್ಲಿ ಬೆಳೆಸುವ ಕೆಲಸವಾಗಬೇಕು. ಮಕ್ಕಳಿಗೆ ಸಂಗೀತಾಭ್ಯಾಸ ಮಾಡಿಸಿದರೆ ಅದು ಹೃದಯಕ್ಕೆ ಪ್ರವೇಶ ಮಾಡಿ ಮುಂದೆ ಈ ಕ್ಷೇತ್ರದಲ್ಲಿ ಉತ್ತಮ ಭವಿಷ್ಯ ಕಂಡುಕೊಳ್ಳಬಹುದು. ಮಕ್ಕಳ ಭವಿಷ್ಯ ಪಠ್ಯವೊಂದರಿಂದಲೇ ನಿರ್ಧಾರ ಆಗುವುದಿಲ್ಲ ಎಂದು ಹೇಳಿದರು.  ಸ್ವರಮೇಧಾ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಗೀತ ಕಲಾವಿದ ಶಿವಮೊಗ್ಗ ವೇಣುಗೋಪಾಲ್, ಸಂಗೀತ ಕಲಿಕೆ ಫ್ಯಾಷನ್ ಆಗಬಾರದು ಎಂದರು. ನವೀನ್ ಶರ್ಮರಿಗೆ ಸಾಧನಾ ಪ್ರಶಸ್ತಿ, ಅನಘಾ ಭಟ್ ಇವರಿಗೆ ಪ್ರೇರಣಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರತಿಷ್ಠಾನದ ಅಧ್ಯಕ್ಷ ಎಚ್.ಕೆ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಎ.ಎನ್.ವೆಂಕಟಕೃಷ್ಣ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement