ವೈಕುಂಠ ಏಕಾದಶಿ ಸಂಭ್ರಮ
ಶಿಕಾರಿಪುರ: ವೈಕುಂಠ ಏಕಾದಶಿ ಪ್ರಯುಕ್ತ ಶಿಕಾರಿಪುರ ಪಟ್ಟಣದ ಜಯನಗರದ ಏಕೈಕ ಶ್ರೀಲಕ್ಷ್ಮಿವೆಂಕಟೇಶ್ವರ ದೇವಸ್ಥಾನದಲ್ಲಿ ಶನಿವಾರ ವಿಶೇಷ ಅಲಂಕಾರ, ನೈವೇದ್ಯ, ಅಭಿಷೇಕ, ನಿರಂತರ ಭಜನೆ, ಭಕ್ತರಿಗೆ ಪ್ರಸಾದ ವಿತರಣೆ ಮತ್ತಿತರ ಧಾರ್ಮಿಕ ವಿಧಿವಿಧಾನಗಳು ಶಾಸ್ತ್ರೋಕ್ತವಾಗಿ ನಡೆಯಿತು. ದೇವಾಲಯದಲ್ಲಿ ಬೆಳಗಿನ ಜಾವದಿಂದ ದೇವರ ಸಹಿತ ದೇವಾಲಯ ಸಂಪೂರ್ಣ ಹೂವಿನ ಅಲಂಕಾರದಿಂದ ಕಂಗೊಳಿಸುತ್ತಿತ್ತು. ಹೂವಿನ ಅಲಂಕಾರ ಭಕ್ತರಲ್ಲಿ ದೈವಭಕ್ತಿ ಇಮ್ಮಡಿಸಲು ಕಾರಣವಾಗಿತ್ತು.
ಧಾರ್ಮಿಕ ಸೇವೆ: ವೈಕುಂಠ ಏಕಾದಶಿ ಪ್ರಯುಕ್ತ ಸಂಜೆ 6 ರಿಂದ ಸ್ಥಳೀಯ ಶ್ರೀದತ್ತಕೇವಲಾನಂದಾಶ್ರಮದ ಶಿವಾನಂದ ತೀರ್ಥರಿಂದ ಧರ್ಮಸಂದೇಶ, ಅರ್ಚಕ ಬಾಟ್ನಿ ವಾದಿರಾಜಾಚಾರ್ ಅವರಿಂದ ವೈಕುಂಠ ಏಕಾದಶಿ ಮಹತ್ವ ಬಗ್ಗೆ ಉಪನ್ಯಾಸ, ರಾತ್ರಿ ಹರಿವಾಣ ಸೇವೆ, ನಂತರದಲ್ಲಿ ದೇವರನ್ನು ಮಲಗಿಸಿ ದ್ವಾದಶಿಗೆ ಅನುಗೊಳಿಸುವ ಕಾರ್ಯ ನಡೆಯಲಿದೆ. ಪ್ರಮುಖರಾದ ಗುರುಮೂರ್ತಿ ದಂಪತಿ, ಪುರಸಭಾ ಸದಸ್ಯ ನಾಗರಾಜಗೌಡ, ಮೋಹನ್, ಮುಖ್ಯಾಧಿಕಾರಿ ಮನೋಹರ್, ಗುರುರಾಜ ಜಗತಾಪ್ ಮತ್ತಿತರರು ದೇಗುಲಕ್ಕೆ ಭೇಟಿ ನೀಡಿ ದರ್ಶನ ಪಡೆದರು.