ಅಭಿರುಚಿ ಕೆಟ್ಟರೆ ಸಮಾಜ ಕೆಟ್ಟಂತೆ
ಶಿವಮೊಗ್ಗ: ಸಮಾಜವನ್ನು ಕೆಡಿಸಬೇಕೆಂದರೆ ಜನರ ಅಭಿರುಚಿಯನ್ನು ಕೆಡಿಸಿದರೆ ಸಾಕು ಎಂದು ಸಾಹಿತಿ, ಪತ್ರಕರ್ತ ಶರತ್ ಕಲ್ಕೊಡ್ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ ಶನಿವಾರ ಸಂಜೆ ಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯಕ್ರಮದಲ್ಲಿ ಅವರು- ಮಾಧ್ಯಮ ಮತ್ತು ಉದ್ಯಮ - ವಿಷಯವಾಗಿ ಉಪನ್ಯಾಸ ನೀಡಿ, ಗಾಂಧೀಜಿ ಅವರು ಆ ಕಾಲದಲ್ಲಿಯೇ ಕೆಲವು ವರದಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಹಿಂದೂ-ಮುಸ್ಲೀಂ ಕೋಮುಗಲಭೆ ಬಗೆಗಿನ ವರದಿಗಳನ್ನು ಖಂಡಿಸಿದ್ದರು ಎಂದು ಪ್ರಸ್ತಾಪಿಸಿದರು. ಆದರೂ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಪತ್ರಿಕೆಗಳೂ ಸಹ ದೇಶದ ಬಗ್ಗೆ ಹೋರಾಟ ಮಾಡಿದ್ದವು. ಅಂದುಕೆಲ ಪತ್ರಿಕೆಗಳು ಮೆಚ್ಚುವ ಕೆಲಸ ಮಾಡಿದ್ದವು. ಇಂದು ಮಾದ್ಯಮ ಕಲುಷಿತಗೊಂಡಿದೆ. ಸಿನಿಮಾ ಮಾಧ್ಯಮ ಕುಲಗೆಟ್ಟುಹೋಗಿದೆ. ನಿಮ್ಮ ಮಕ್ಕಳನ್ನು ಆದಷ್ಟೂ ಟಿವಿ, ಕಂಪ್ಯೂಟರ್ ನಿಂದ ದೂರವಿಡಿ ಎಂದು ಸಲಹೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಡಾ. ತೀ.ನಂ. ಶಂಕರನಾರಾಯಣ, ಭವಿಷ್ಯದ ಬಗ್ಗೆ ಆಶಾಭಾವನೆ ಕಾಣುತ್ತಿಲ್ಲ. ಫ್ಯೂಚರ್ ಶಾಕ್ ನಮ್ಮನ್ನು ಕಾಡಬಹುದು. ಇಂಟರ್ ನೆಟ್, ಮೊಬೈಲ್‌ಗಳು ನಮ್ಮ ಜಗತ್ತನ್ನೇ ಬದಲಿಸುತ್ತಿವೆ ಎಂದರು.
ಉಪನ್ಯಾಸ ಮಾಲಿಕೆ
ಶಿವಮೊಗ್ಗ: ಸನ್ಮತಿ ಸಂಸ್ಥೆಯು ವ್ಯಕ್ತಿತ್ವ ವಿಕಸನ, ಆಡಳಿತ ವ್ಯವಸ್ಥೆ ಮತ್ತು ಸಹಕಾರಿ ಸಂಬಂಧಿತ ವಿವಿಧ ವಿಷಯಗಳಲ್ಲಿ ತರಬೇತಿ ನೀಡಲು ಉದ್ದೇಶಿಸಿದ್ದು, ಆಸಕ್ತರಿಂದ ಹೆಸರು ನೋಂದಣಿಗೆ ಅವಕಾಶ ಕಲ್ಪಿಸಿದೆ.
ಸಮಯ ಪಾಲನೆ, ಪರಿಣಾಮಕಾರಿ ಸಂವಹನ, ಗುಣಮಟ್ಟ ನಿರ್ವಹಣೆ, ಒತ್ತಡ ನಿವಾರಣೆ, ವೃತ್ತಿ ಕೌಶಲ್ಯಗಳು, ಗ್ರಾಹಕ ಸಂಬಂಧಗಳ ನಿರ್ವಹಣೆ, ಸಹಕಾರ ಕಾಯಿದೆ ಮತ್ತು ನಿಯಮಗಳು, ಲೆಕ್ಕ- ಪತ್ರ ನಿರ್ವಹಣೆ, ಸಹಕಾರಿ ಸಭೆಗಳು, ಸಹಕಾರಿ ನಾಯಕತ್ವ, ಸಂಪನ್ಮೂಲ ನಿರ್ವಹಣೆ, ವ್ಯವಹಾರ ಅಭಿವೃದ್ಧಿ, ಕಚೇರಿ ಆಡಳಿತ, ರಿಕವರಿ ಮ್ಯಾನೇಜ್‌ಮೆಂಟ್, ಸಹಕಾರಿ ತೆರಿಗೆಗಳು, ಎನ್‌ಪಿಎ ಮ್ಯಾನೇಜ್‌ಮೆಂಟ್ ವಿಷಯಗಳ ಕುರಿತು ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸ, ಪ್ರಾತ್ಯಕ್ಷಿಕೆ ಶಿಬಿರ ನಡೆಸಲಾಗುವುದು. ಆಸಕ್ತರು ಮೊ. 9448149358) ಸಂಪರ್ಕಿಸಬಹುದು.