ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ನಾಳೆಯಿಂದ ಮಹಾರುದ್ರಯಾಗ ಪ್ರಾರಂಭ

Lingaraj Badiger
Updated On : 13 Jan 2014, 10:44 am

ಕ.ಪ್ರ.ವಾರ್ತೆ, ಹೊಸನಗರ, ಜ. 12
ತಾಲೂಕಿನ ಬಿದನೂರು ನಗರದ ಶ್ರೀ ಪಾರ್ವತಿ ನೀಲಕಂಠೇಶ್ವರ ದೇವಾಸ್ಥಾನದ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥವಾಗಿ ಜ.14 ರಿಂದ 3 ದಿನಗಳ ಕಾಲ ಮಹಾರುದ್ರಯಾಗವನ್ನು ಹಮ್ಮಿಕೊಳ್ಳಲಾಗಿದ್ದು, ಸಕಲ ಸಿದ್ಧತೆ ನಡೆಸಲಾಗಿದೆ.
ಶೃಂಗೇರಿ ಶ್ರೀ ಶಾರದಾಪೀಠದ ಭಾರತೀತೀರ್ಥ ಸ್ವಾಮೀಜಿಯ ಸಾನ್ನಿಧ್ಯದಲ್ಲಿ ಕೊನೆಯ ದಿನ ಜ.16ರಂದು ಮಹಾರುದ್ರಾಯಾಗ ಪೂರ್ಣಾಹುತಿ ಸಂಪನ್ನಗೊಳ್ಳಲಿದೆ.
ಕೊನೆಯ ದಿನದಂದು ನಗರಕ್ಕೆ ಆಗಮಿಸುವ ಶೃಂಗೇರಿ ಶ್ರೀಗಳ ಪುರಪ್ರವೇಶ, ಭೋಜನ, ಪ್ರಚಾರ, ಅಲಂಕಾರ ಎಲ್ಲಾ ಹಂತದಲ್ಲು ಯಶಸ್ಸಿಗೆಗಾಗಿ ಸಮಿತಿ ಕಾರ್ಯಕರ್ತರು ಶ್ರಮಿಸುತ್ತಿದ್ದು ಪೂರ್ವಭಾವಿ ಸಿದ್ಧತೆ ಕೈಗೊಳ್ಳಾಗಿದೆ.
ಜ.14 ಮತ್ತು 15ರಂದು ಮಧ್ಯಾಹ್ನ 3ಕ್ಕೆ ಮೈಸೂರಿನ ವಾಸುದೇವಭಟ್‌ರಿಂದ ಧಾರ್ಮಿಕ ಉಪನ್ಯಾಸ ನಡೆಯಲಿದೆ. ಜ.16ಕ್ಕೆ ಮಹಾರುದ್ರಯಾಗ ಸಂಪನ್ನಗೊಂಡ ನಂತರ ಮಧ್ಯಾಹ್ನ 4ಕ್ಕೆ ಶೃಂಗೇರಿ ಶ್ರೀಗಳ ಆಶೀರ್ವಚನ ಕಾರ್ಯಕ್ರಮ ನಡೆಯಲಿದೆ.
ಸಮಿತಿ ರಚನೆ: ಮಹಾರುದ್ರಯಾಗ ಯಶಸ್ಸಿಗಾಗಿ ಸಪರಿವಾರ ಶ್ರೀ ನೀಲಕಂಠೇಶ್ವರ ಮಹಾರುದ್ರಯಾಗ ಸಮಿತಿ ರಚಿಸಲಾಗಿದ್ದು, ಗೌರವಾಧ್ಯಕ್ಷರಾಗಿ ಶೃಂಗೇರಿ ಪೀಠದ ಆಸ್ಥಾನದ ವಿದ್ವಾನಿ ವಿನಾಯಕ ಉಡುಪ, ಅಧ್ಯಕ್ಷರಾಗಿ ಖ್ಯಾತ ಗಾಯಕ ನಗರ ಶ್ರೀನಿವಾಸ ಉಡುಪ, ಉಪಾಧ್ಯಕ್ಷರಾಗಿ ಕೆಸರೆಮನೆ ರಾಮಚಂದ್ರರಾವ್, ವಿನಾಯಕ ಉಡುಪ, ಕಾರ್ಯದರ್ಶಿಯಾಗಿ ಗೋಪಾಲ ಉಡುಪ, ನಾರಾಯಣ ಉಪಾಧ್ಯಾಯ, ಬಿ.ಎಸ್. ವಿನಾಯಕ, ಖಚಾಂಚಿಯಾಗಿ ಎನ್. ಸತ್ಯನಾರಾಯಣರಾವ್ ದೇವಸ್ಥಾನ ಸಮಿತಿಯ ಸುಧೀಂದ್ರಾಚಾರ್ ಮತ್ತು ಊರಿನ ಪ್ರಮುಖರು ಸಮಿತಿಯಲ್ಲಿದ್ದು, ಸಾಕಷ್ಟು ದಿನದಿಂದ ಸಿದ್ಧತೆ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಪಾದಪೂಜೆಗೆ ಅವಕಾಶ: ಶೃಂಗೇರಿ ಸ್ವಾಮೀಜಿಗಳಿಗೆ ಫಲಪುಷ್ಪ ಸಮರ್ಪಣೆ ಮತ್ತು ಪಾದಪೂಜೆಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಹೆಚ್ಚಿನ ಮಾಹಿತಿಗೆ ಮೊ.9449494163, 9449494769ಕ್ಕೆ ಸಂಪರ್ಕಿಸಲು ಸಮಿತಿ ಕೋರಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement