ಆರ್ಟಿಇ ಪ್ರವೇಶ ದಾಖಲಾತಿಗೆ ಸಿದ್ಧತೆ
ಸೊರಬ: ಶಿಕ್ಷಣ ಹಕ್ಕು ಅಧಿನಿಯಮಾನುಸಾರ 2014-15ನೇ 1ನೇ ತರಗತಿ ಅಥವಾ ಪೂರ್ವ ಪ್ರಾಥಮಿಕ ತರಗತಿಗೆ ದಾಖಲು ಮಾಡಿಕೊಳ್ಳಲು ಪೂರ್ವ ಸಿದ್ಧತಾ ಕಾರ್ಯ ಹಮ್ಮಿಕೊಳ್ಳಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ತಾಲೂಕಿನ ಅನುದಾನ ರಹಿತ ಪೂರ್ವ ಪ್ರಾಥಮಿಕ, ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಅಧಿನಿಯಮದ ಪ್ರಕಾರ 2014-15ನೇ ಸಾಲಿನ ಆರ್ಟಿಇ ಅಡಿ ಮಕ್ಕಳ ದಾಖಲಾತಿ ಶೇ.25ರ ಅನುಪಾತ ಅನುಸರಿಸಿ, ಶಾಲಾ ದಾಖಲಾತಿ ಕೋರಿ ಪೋಷಕರು ಅರ್ಜಿಗಳನ್ನು ಫೆ.8ರ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಅನುಪಾತದನ್ವಯ ತಾಲೂಕಿನ ಭಾರಂಗಿ ಸಿಂಧು ಬಿಂದು ಕನ್ನಡ ಮಾಧ್ಯಮ ಕಿಪ್ರಾಶಾಲೆಗೆ 5 ಮಕ್ಕಳು, ಕುಪ್ಪಗಡ್ಡೆ ಶಾರದ ವಿದ್ಯಾ ಮಂದಿರ ಕನ್ನಡ ಮಾಧ್ಯಮ ಕಿಪ್ರಾಶಾಲೆಗೆ 6 ಮಕ್ಕಳು, ಕೋಟಿಪುರದ ಎವರಾನ್ ಕನ್ನಡ ಮಾಧ್ಯಮ ಕಿಪ್ರಾಶಾಲೆಗೆ 7, ಕಮನವಳ್ಳಿ ಬಸವೇಶ್ವರ ಕನ್ನಡ ಮಾಧ್ಯಮ ಕಿಪ್ರಾಶಾಲೆಗೆ 3, ಹಿರೇಮಾಗಡಿ ಮುರುಘರಾಜೇಂದ್ರ ಕನ್ನಡ ಮಾಧ್ಯಮ ಕಿಪ್ರಾ ಶಾಲೆಗೆ 6, ಉಳವಿ ರಾಘವೇಂದ್ರ ಕನ್ನಡ ಮಾಧ್ಯಮ ಹಿಪ್ರಾಶಾಲೆಗೆ 6, ಆನವಟ್ಟಿಯ ವಿಶ್ವಭಾರತಿ ಕನ್ನಡ ಮಾಧ್ಯಮ ಹಿ.ಪ್ರಾ. ಶಾಲೆಗೆ 11, ಆನವಟ್ಟಿ ನಂದಿ ಕನ್ನಡ ಮಾಧ್ಯಮ ಹಿಪ್ರಾಶಾಲೆಗೆ 1, ನಿಸರಾಣಿ ಕನ್ನಡ ಮಾಧ್ಯಮ ವಿಸಂ ಹಿ.ಪ್ರಾ.ಶಾಲೆಗೆ 6 ಮಕ್ಕಳು ದಾಖಲಾಗಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.