ಇಂದು ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
ಸೊರಬ: ಜ.14ರಂದು ಇಲ್ಲಿನ ತಾಲೂಕು ಈಡಿಗ(ದೀವರ) ನೌಕರರ ಕ್ಷೇಮಾಭಿವೃದ್ಧಿ ಸಂಘ ಗುರುಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭ ಹಮ್ಮಿಕೊಂಡಿದೆ. ಬೆಳಿಗ್ಗೆ 10 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮ ಸೋಲೂರು ಮಠದ ರೇಣುಕಾನಂದ ಶ್ರೀಗಳ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಶಾಸಕ ಮಧುಬಂಗಾರಪ್ಪ ಉದ್ಘಾಟಿಸಲಿದ್ದಾರೆ. ಕಾನುಗೋಡು ಎಂ.ಹೆಚ್. ನಾಯ್ಕ್ ಅವರು, ಯುವಜನ ಶಿಕ್ಷಣ ಮತ್ತು ಸಂಪ್ರದಾಯ ಕುರಿತು ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಅನೇಕ ಜನಪ್ರತಿನಿಧಿ, ಮುಖಂಡರು ಪಾಲ್ಗೊಳ್ಳಲಿದ್ದಾರೆ.
ದೀವರ ಸಮುದಾಯದಲ್ಲಿ ಉನ್ನತ ಶ್ರೇಣಿ ಹೊಂದಿ ವೃತ್ತಿಯಲ್ಲಿರುವ ಅನೇಕರಿಗೆ ಸನ್ಮಾನ, ಪ್ರತಿಭಾ ಪುರಸ್ಕಾರವಿದೆ ಎಂದು ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.