ಉಪನ್ಯಾಸಕಗೆ ಕಲಿಕೆ ನಿರಂತರ ಪ್ರಕ್ರಿಯೆ
ಭದ್ರಾವತಿ: ತಾಂತ್ರಿಕ ಶಿಕ್ಷಣ ಉಪನ್ಯಾಸಕನಿಗೆ ಕಲಿಕೆ ಒಂದು ನಿರಂತರ ಪ್ರಕ್ರಿಯೆ. ಆತ ತನ್ನ ಜ್ಞಾನಮಟ್ಟವನ್ನು ಹೆಚ್ಚಿಸಿಕೊಂಡು ಹೋದಂತೆಲ್ಲಾ ಬೋಧನಾ ವಲಯದಲ್ಲಿ ಹೆಚ್ಚು ಪ್ರಸ್ತುತನಾಗುತ್ತಾನೆ ಎಂದು ದಾವಣಗೆರೆಯ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಸಂಸ್ಥೆಯ ನಿರ್ದೇಶಕ ಹಾಗೂ ಭಾರತೀಯ ತಾಂತ್ರಿಕ ಶಿಕ್ಷಣ ಸೊಸೈಟಿಯ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷರೂ ಆದ ವೈ. ವೃಷಭೇಂದ್ರಪ್ಪ ನುಡಿದರು.
ಪಟ್ಟಣದ ವಿಐಎಸ್ಎಸ್ಜೆ ಸರ್ಕಾರಿ ಪಾಲಿಟೆಕ್ನಿಕ್ನಲ್ಲಿ ಸೋಮವಾರ ಪ್ರಾರಂಭವಾದ ಎರಡು ವಾರಗಳ ಮುಂದುವರೆದ ತಾಂತ್ರಿಕ ಶಿಕ್ಷಣ ಕೇಂದ್ರವು ಏರ್ಪಡಿಸಿದ್ದ ಎಂಜಿನಿಯರಿಂಗ್ ಮತ್ತು ಪಾಲಿಟೆಕ್ನಿಕ್ ಉಪನ್ಯಾಸಕರ ಕಾರ್ಯಾಗಾರ ಮತ್ತು ತರಬೇತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತಾ, ತಂತ್ರಜ್ಞಾನನ ಹೆಚ್ಚಿದಂತೆಲ್ಲಾ ತಾಂತ್ರಿಕ ಶಿಕ್ಷಣ ಉಪನ್ಯಾಸಕರ ಬೋಧನಾ ಗುಣಮಟ್ಟ ಸುಧಾರಣೆಗೊಳಿಸುವ ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳೂ ಹೆಚ್ಚಾಗುತ್ತಿವೆ ಎಂದರು.