ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ದುರ್ಗಿಗುಡಿ ಕ್ರಿಕೆಟ್ ಕ್ಲಬ್ಗೆ ಜಯ

Rashmi Kasaragodu
Updated On : 14 Jan 2014, 11:24 am

ಶಿವಮೊಗ್ಗ: ಸ್ವಾಮಿ ವಿವೇಕಾನಂದರ 150ನೇ ಹುಟ್ಟುಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾ ನಡೆಸಿದ ಖೇಲೇಗಾ ಯುವ- ಜೀತೇಗಾ ಭಾರತ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ಭರ್ಜರಿ 99 ರನ್ಗಳ ಜಯ ಸಾಧಿಸಿ ರಾಜ್ಯಮಟ್ಟದ ಪಂದ್ಯಾವಳಿಗೆ ಆಯ್ಕೆಯಾಯಿತು.
ಇಲ್ಲಿನ ಪಿಇಎಸ್ ಮೈದಾನದಲ್ಲಿ ಎರಡು ದಿನ ನಡೆದ ಪಂದ್ಯಾವಳಿಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ 16 ತಂಡಗಳು ಪಾಲ್ಗೊಂಡಿದ್ದವು. ಈ ಪೈಕಿ ಫೈನಲ್ನಲ್ಲಿ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ಹಾಗೂ ಎಫ್ಸಿಸಿ ನಡುವೆ ಹಣಾಹಣಿ ನಡೆದಿತ್ತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ನಿಗದಿತ 20 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 175 ರನ್ ಕಲೆಹಾಕಿತು. ನಿಧೀಶ್ 87, ದೇವರಾಜ ಪಾಟೀಲ್ 32, ಎಂ.ಕೆ. ಮಂಜುನಾಥ್ 28 ರನ್ ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಎಫ್ಸಿಸಿ ತಂಡ 76 ರನ್ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ದೇವರಾಜ್ ಪಾಟೀಲ್ 10 ರನ್ಗೆ ಎರಡು ವಿಕೆಟ್ ಕಿತ್ತರೆ, ಕಾರ್ತಿಕ್ ಐದು ರನ್ಗೆ ಮೂರು ವಿಕೆಟ್ ಪಡೆದುಕೊಂಡು ತಂಡದ ಗೆಲವಿಗೆ ಕಾರಣರಾದರು.
ಫೈನಲ್ನಲ್ಲಿ ಗೆದ್ದ ದುರ್ಗಿಗುಡಿ ಕ್ರಿಕೆಟ್ ಕ್ಲಬ್ ಮುಂದಿನ ಹಂತಕ್ಕೆ ತೇರ್ಗಡೆಯಾಗಿದ್ದು, ರಾಜ್ಯಮಟ್ಟದ ಪಂದ್ಯಾವಳಿಯಲ್ಲಿ ಸೆಣಸಲಿದೆ. ರಾಷ್ಟ್ರೀಯ ಮಟ್ಟದ ಪಂದ್ಯಾವಳಿಯ ಅಂತಿಮ ಪಂದ್ಯ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ನಡೆಯಲಿದ್ದು, ಫೈನಲ್ ಗೆಲವು ಪಡೆದ ತಂಡಕ್ಕೆ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಪ್ರಶಸ್ತಿ ನೀಡಲಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ಗೆಲವು ಸಾಧಿಸಿದ ದುರ್ಗಿಗುಡಿ ಕ್ರಿಕೆಟ್ ತಂಡಕ್ಕೆ ಬಿಜೆಪಿ ಮುಖಂಡ ಸುಭಾಷ್ ಬಹುಮಾನ ವಿತರಿಸಿದರು. ಈ ಸಂದರ್ಭದಲ್ಲಿ ಯುವ ಮೋರ್ಚಾ ಪ್ರಭಾರಿ ಡಿ.ಎಸ್.ಅರುಣ್, ಹಿರಣ್ಣಯ್ಯ, ಭವಾನಿರಾವ್ ಮೋರೆ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement