ಬೂತ್ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ
ಭದ್ರಾವತಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗವು ಮತದಾರರ ಪಟ್ಟಿಯನ್ನು ಪರಿಷ್ಕರಿಸುವಲ್ಲಿ ರಾಷ್ಟ್ರೀಯ ಪಕ್ಷಗಳಿಗೂ ಅವಕಾಶ ನೀಡಿರುವುದರಿಂದ ಭಾರತೀಯ ಜನತಾ ಪಕ್ಷವು ದೇಶದೆಲ್ಲೆಡೆ ಬೂತ್ ಮಟ್ಟದ ಕಾರ್ಯಾಗಾರಕ್ಕೆ ಚಾಲನೆ ನೀಡಿದೆ ಎಂದು ಮಾಜಿ ಶಾಸಕ ಕೆ.ಜಿ. ಕುಮಾರಸ್ವಾಮಿ ತಿಳಿಸಿದರು.
ಭಾನುವಾರ ಭಾ.ಜ.ಪ ಭದ್ರಾವತಿ ಘಟಕವು ಪಟ್ಟಣದ ವಾಸವಿ ಮಹಲ್ನಲ್ಲಿ ಏರ್ಪಡಿಸಿದ್ದ ಬೂತ್ ಮಟ್ಟದ ಕಾರ್ಯಕರ್ತರ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯವರನ್ನು ಈ ರಾಷ್ಟ್ರದ ಪ್ರಧಾನಿಯನ್ನಾಗಿಸುವ ಮಹಾನ್ ಕಾರ್ಯದಲ್ಲಿ ಪ್ರತಿಯೊಬ್ಬ ಕಾರ್ಯರ್ತನೂ ತನ್ನನ್ನು ತಾನು ಸಕ್ರಿಯವಾಗಿ ಪಕ್ಷದ ಅಭಿಯಾನದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ ಎಂದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಭಾಜಪ ಅಭ್ಯರ್ಥಿಗಳ ಜಯಕ್ಕೆ ಕಾರ್ಯಕರ್ತರು ಶ್ರಮಿಸಬೇಕೆಂದು ಅವರು ಕರೆ ನೀಡಿದರು.
ಭಾಜಪ ಭದ್ರಾವತಿ ತಾಲೂಕು ಘಟಕದ ಅಧ್ಯಕ್ಷ ಎಂ. ಮಂಜುನಾಥ್, ಬಿ.ಕೆ. ಶ್ರೀನಾಥ್, ಎಸ್.ಬಿ. ಶಿವಾಜಿರಾವ್ ಸಿಂಧ್ಯ, ಜಿ. ಆನಂದಕುಮಾರ್, ಸುನಿತ, ತಾತೋಜಿರಾವ್, ಗಂಗಾಧರ ಜೋಯಿಸ್, ಸುನಿತಾ, ನಟರಾಜ್, ನವೀನ್ ಮೊದಲಾದವರು ವೇದಿಕೆಯಲ್ಲಿದ್ದರು.