ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಅವಶ್ಯ
ಕ.ಪ್ರ.ವಾರ್ತೆ ಟಿ ಶಿಕಾರಿಪುರ ಟಿ ಜ.13
ವಿದ್ಯಾರ್ಥಿಗಳಲ್ಲಿ ವಿದ್ಯೆ ಬಗೆಗಿನ ಶ್ರದ್ಧೆ, ಜೀವನದ ಮೌಲ್ಯದ ಅಧ್ಯಯನ ಬಗ್ಗೆ ತಾತ್ಸಾರ ಭಾವನೆ ಹೆಚ್ಚಾಗಿದೆ. ಇದರಿಂದಾಗಿ ಪ್ರತಿಯೊಬ್ಬರಲ್ಲಿಯೂ ನಂಬಿಕೆ ಕಳೆದುಕೊಂಡು ಪರಸ್ಪರರಲ್ಲಿ ದ್ವೇಷ ಭಾವನೆ ಹೆಚ್ಚಾಗುತ್ತಿದೆ ಎಂದು ಆನಂದಪುರದ ಶ್ರೀಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ಸೋಮವಾರ ನಡೆದ ಸ್ವಾಮಿ ವಿವೇಕಾನಂದರ 151 ನೇ ಜಯಂತಿ , ವಿವೇಕಾನಂದ ಪತಂಜಲಿ ಸ್ಮರಣ ಸಂಚಿಕೆ ಬಿಡುಗಡೆ ಹಾಗೂ ದಿ. ಮೈತ್ರಾದೇವಿ ಯಡಿಯೂರಪ್ಪ ದತ್ತಿ ಉಪನ್ಯಾಸ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ಕಾರ್ಯದರ್ಶಿ, ಸಂಸದ ರಾಘವೇಂದ್ರ ಮಾತನಾಡಿ, ನಾಡನ್ನು ಕಟ್ಟುವಲ್ಲಿ ತ್ಯಾಗ ನಿಸ್ವಾರ್ಥ ಮನೋಭಾವನೆ ಅತ್ಯಗತ್ಯವಾಗಿದ್ದು, ಇದರಿಂದ ಪ್ರತಿ ವಿದ್ಯಾರ್ಥಿ ಜೀವನದಲ್ಲಿ ಸಾಧಿಸಲು ಸಾಧ್ಯ ಎಂದರು.
ವಿವೇಕಾನಂದರ ಪತಂಜಲಿ ಸ್ಮರಣ ಸಂಚಿಕೆಯನ್ನು ತಾಲೂಕು ಕಸಾಪ ಅಧ್ಯಕ್ಷ ಶಿವರಂಜಿನಿ ಸುದರ್ಶನ್ ಬಿಡುಗಡೆಗೊಳಿಸಿದರು. ತಾಲೂಕು ಕಾರ್ಯನಿರತ ಪರ್ತಕರ್ತರ ಸಂಘದ ಅಧ್ಯಕ್ಷ ಹುಚ್ರಾಯಪ್ಪ, ಸಂಸ್ಥೆಯ ಪ್ರಾಚಾರ್ಯ ಡಾ.ವೀರೇಂದ್ರ, ಜಯಶ್ರೀ, ದಯಾನಂದ್, ಕುಬೇರಪ್ಪ, ವಿದ್ಯಾಶಂಕರ್, ಪರಮೇಶ್ವರಯ್ಯ, ವಿಶ್ವನಾಥ್ ಮತ್ತಿತರರು ಉಪಸ್ಥಿತರಿದ್ದರು.
ಕುಬೇರಪ್ಪ ಸ್ವಾಗತಿಸಿ, ಕೋಟೋಜಿರಾವ್ ನಿರೂಪಿಸಿ, ಡಾ.ವಿನಾಯಕ್ ವಂದಿಸಿದರು.